ಪಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಆರತಿ, ಜಯಂತಿ ಮತ್ತು ಚಂದ್ರಶೇಖರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.
ಈ ಚಿತ್ರ ಇದೇ ಹೆಸರಿನ ಭಾರತಿಸುತ ರವರ ಕಾದಂಬರಿ ಆಧಾರಿತವಾಗಿದೆ. ಭಾರತಿಸುತರವರು ಒಂದು ಇಂಗ್ಲೀಷ್ ಕಾದಂಬರಿಯ ಆಧಾರದ ಮೇಲೆ ಇದನ್ನು ರಚಿಸಿದ್ದರು. ಒಬ್ಬ ಮಾಜಿ ಯೋಧ ಮತ್ತು ಅವನ ಪಕ್ಕದ ಮನೆಯವನ ಮೇಲೆ ಮೋಹಿತಳಾಗುವ ಯೋಧನ ಪತ್ನಿಯ ಕ್ಲಿಷ್ಟ ಕಥೆಯನ್ನು ಚಿತ್ರ ಹೊಂದಿತ್ತು.