ರವಿ ಸುಬ್ಬಾ ರಾವ್ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ಸಿನಿಮಾ ಈ ಪಟ್ಟಣಕ್ಕೆ ಏನಾಗಿದೆ. ರಾಧಿಕಾ ರಾಮ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು, ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ರವಿ ಸುಬ್ಬ ರಾವ್ ರಮ್ಮ ನೈಜ ಜೀವನದಲ್ಲಿ ಕಂಡ ವಿವಿಧ ಘಟನೆಗಳಿಂದ ಸ್ಫೂರ್ತಿ ಪಡೆದು ಸಿನಿಮಾವನ್ನು ನಿರ್ದೇಶಿಸಿ, ನಾಯಕನಾಗಿ ನಟಿಸಿ, ನಿರ್ಮಿಸಿದ್ದಾರೆ. ಚಿತ್ರದ ಕಥಾವಸ್ತುವು ಜೂಜು ಮತ್ತು ಬೆಟ್ಟಿಂಗ್ ಮಾಫಿಯಾದ ಸುತ್ತ ಸುತ್ತುತ್ತದೆ. ಅನಿಲ್ ಸಿಜೆ ಸಂಗೀತ ಸಂಯೋಜಿಸಿದ್ದಾರೆ.