`ಫುಲ್ ಟೈಟ್ ಪ್ಯಾತೆ' ಚಿತ್ರದಲ್ಲಿ ಎಸ್.ಎಲ್.ಜಿ ಪುಟ್ಟಣ್ಣ ನಿರ್ದೇಶಿಸಿ ನಿರ್ಮಾಣ ಮಾಡಿ ನಾಯಕನಾಗಿ ನಟಿಸಿದ್ದಾರೆ. ಸೂರ್ಯ, ಬಿರಾದಾರ,ಎಂ.ಎಂ.ಮುರುಗರಾಜ್, ಮಾನಸ ಗೌಡ ಮುಂತಾದ ಕಲಾವಿದರು ನಟಿಸಿದ್ದಾರೆ.
ಚಿತ್ರದ ಕಥೆ ಮಂಡ್ಯದ ಹಳ್ಳಿಯೊಂದರಲ್ಲಿ ತೆರೆದುಕೊಳ್ಳುತ್ತದೆ. ಚಿತ್ರದ ಕಥಾನಾಯಕ ಮಂಜನನ್ನು ಊರಿನಲ್ಲಿರುವ ಜನ ಪ್ಯಾತೆ ಎಂಬ ಅಡ್ಡನಾಮಸಿಂದಲೇ ಕರೆಯುತ್ತಿರುತ್ತಾರೆ. ಪಟ್ಟಣದಿಂದ ಇಬ್ಬರು ಯುವಕರು ಮಧ್ಯಪಾನ ವ್ಯಸನದ ಕುರಿತು ಡಾಕುಮೆಂಟರಿ ಮಾಡಲು ಈ ಹಳ್ಳಿಗೆ ಬರುತ್ತಾರೆ. ತಮ್ಮ ಡಾಕುಮೆಂಟರಿಯಲ್ಲಿ ಅವರು ಕುಡಿದು ಯಾವಾಗಲೂ ಫುಲ್ ಟೈಟ್ ಇರುವ ಪ್ಯಾತೆಯನ್ನು ಆಯ್ದು ಕೊಳ್ಳುತ್ತಾರೆ. ಅಲ್ಲಿಂದ ಪ್ಯಾತೆಯ ಕಥೆ ಆರಂಭವಾಗುತ್ತದೆ. ಚಿತ್ರದಲ್ಲಿ ಸಂಫೂರ್ಣವಾಗಿ ಮಂಡ್ಯದ ಭಾಷೆಯನ್ನು ಬಳಸಲಾಗಿದೆ.