ಜ್ಞಾನಜ್ಯೋತಿ ಶ್ರೀ ಸಿದ್ಧಗಂಗಾ ಒಂದು ಭಕ್ತಿಪ್ರಧಾನ ಚಿತ್ರವಾಗಿದ್ದು ಇದು ಶ್ರೀ ಶಿವಕುಮಾರ ಸ್ವಾಮಿಜಿಯವರ ಜೀವನದ ಮೇಲೆ ಬೆಳಕನ್ನು ಚೆಲ್ಲುತ್ತದೆ.ಚಿತ್ರದಲ್ಲಿ ಶ್ರೀನಿವಾಸಮೂರ್ತಿ,ಶ್ರೀಧರ್,ಶಿವಧ್ವಜ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರೆ,ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಭಾರತಿ ವಿಷ್ಣುವರ್ಧನ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು.ಸುಚೇಂದ್ರ ಪ್ರಸಾದ್,ದೊಡ್ಡಣ್ಣ,ರಮೇಶ್ ಭಟ್,ತಾರಾ,ವಿನಯ ಪ್ರಸಾದ್,ಪ್ರಮೀಳಾ ಜೋಷಾಯಿ ಮುಂತಾದ ಕಲಾವಿದರು ನಟಿಸಿದ್ದರು.
2008 ರಲ್ಲಿ ತೆರೆಕಂಡ ಈ ಚಿತ್ರವನ್ನು ಮಾಹಾಂತಪ್ಪ ಎಂಬುವರು ಮಹಾತ್ಮ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದರು. ಓಂಕಾರ ಎಂಬುವರು ಚಿತ್ರವನ್ನು ನಿರ್ದೆಶಿಸಿದ್ದರು.
ಚಿತ್ರದಲ್ಲಿ ಒಟ್ಟು 9 ಹಾಡುಗಳಿದ್ದು ಎಸ್.ಪಿ.ಬಾಲಸುಬ್ರಹ್ಮಣ್ಯಂ,ಶಂಕರ ಮಹಾದೇವನ್,ಬಿ.ಆರ್.ಛಾಯಾ,ಅಜಯ ವಾರಿಯರ್ ಮುಂತಾದ ಗಾಯಕರು ಧ್ವನಿ ನೀಡಿದ್ದರು. ಚಿತ್ರದ ಆಡಿಯೋ ಹಕ್ಕುಗಳನ್ನು ಜಂಕಾರ ಮ್ಯೂಸಿಕ್ ಖರೀದಿಸಿತ್ತು.ಕೆ.ಯುವರಾಜ್ ಅವರು ಸಂಗೀತ ಸಂಯೋಜನೆ ಮಾಡಿದ್ದರು