ಸುಮಂತ್ ಶೈಲೇಂದ್ರ ನಾಯಕನಾಗಿ ನಟಿಸಿರುವ `ಗೋವಿಂದ ಗೋವಿಂದ' ಚಿತ್ರವನ್ನು ತಿಲಕ್ ನಿರ್ದೇಶಿಸಿದ್ದಾರೆ. ಕವಿತಾ ಗೌಡ ಮತ್ತು ಭಾವನಾ ಮೆನನ್ ನಾಯಕಿಯರಾಗಿ ನಟಿಸಿದ್ದಾರೆ. ಶೈಲೇಂದ್ರ ಬಾಬು, ರವಿ ಆರ್ ಗರಣಿ ಮತ್ತು ಕಿಶೋರ್ ಎಂ.ಕೆ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹಿತಮ್ ಹಸ್ಸನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಕಥೆ: ಇಬ್ಬರು ಕ್ರೈಮ್ ಲಾರ್ಡ್ ಗಳು, ಕಾಲೇಜಿನ ಬ್ಯಾಕ್ ಬೆಂಚರ್ಸ್, ಒಂದು ಚಿತ್ರವನ್ನು ಮಾಡಲು ಒದ್ದಾಡುವ ವ್ಯಕ್ತಿ ಮತ್ತು ನಟಿಯಾಗಬೇಕೆಂದು ಬಯಸುವ ಒಬ್ಬ ಯುವತಿ ಇವರೆಲ್ಲ ಸನ್ನಿವೇಶಗಳ ಕಾರಣದಿಂದ ಒಂದಾದದಾಗ ನಡೆಯುವ ಹಾಸ್ಯ ಘಟನೆಗಳು ಚಿತ್ರದ ಕಥೆ.