ವಿಠಲ್ ಭಟ್ ನಿರ್ದೇಶನದ ಈ ಕ್ರೈಮ್ ಥ್ರಿಲ್ಲರ್ ಚಿತ್ರದಲ್ಲಿ ಭರತ್, ಚಿರಾಗ್ ರಾಜ್, ರಾಜ್, ಸಹನಾ ಪೊನ್ನಮ್ಮ, ಮಹತಿ ಮತ್ತು ನಂದಿನಿ ನಟರಾಜ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಶಫಿ ಮತ್ತು ಅಶ್ವಥ್ ನೀನಾಸಂ ಪೋಲಿಸ್ ಪಾತ್ರಗಳಲ್ಲಿ ನಟಿಸಿದ್ದರೆ, ಕೆ.ಎಸ್.ಶ್ರೀಧರ್ ಲಾಯರ್ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರಕ್ಕೆ ರಾಕೇಶ್. ಡಿ ಬಂಡವಾಳ ಹೂಡಿದ್ದರೆ, ವೀರ ಸಮರ್ಥ್ ಸಂಗೀತ ನೀಡಿದ್ದಾರೆ.
ಮೂರು ಸ್ನೇಹಿತರು ತಮ್ಮ ಮೂರು ಜನ ಪ್ರೇಯಸಿಯರೊಂದಿಗೆ ಪಾರ್ಟಿ ಮಾಡಿ ರಾತ್ರಿ ಫಾರ್ಮ್ ಹೌಸ್ ನಲ್ಲಿ ಮಲುಗುತ್ತಾರೆ. ಆದರೆ ಬೆಳಿಗ್ಗೆ ಏಳುವಷ್ಟರಲ್ಲಿ ಅದರಲ್ಲಿ ಒಬ್ಬ ಹುಡುಗಿಯ ಕೊಲೆಯಾಗಿರುತ್ತದೆ. ಈ ಕೊಲೆ ಆರೋಪ ಉಳಿದವರ ಮೇಲೆ ಬರುತ್ತದೆ. ಹಾಗಾದರೆ ನಿಜವಾಗಿ ಈ ಕೊಲೆ ಮಾಡಿದವರಾರರು ? ಹೇಗೆ ಕೊಲೆಯಾಗುತ್ತದೆ ಎಂಬುದು ಈ ಥ್ರಿಲ್ಲರ್ ಚಿತ್ರದ ತಿರುಳು.