'ಹಯಗ್ರೀವ' ಸಿನಿಮಾವನ್ನು ರಘುಕುಮಾರ್ ಒ ಆರ್ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಧನ್ವೀರ್ ಗೌಡ ನಾಯಕನಾಗಿ ಹಾಗೂ ಸಂಜನಾ ಆನಂದ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದಂತೆ ರವಿಶಂಕರ್, ರಂಗಾಯಣ ರಘು, ರಾಜೇಶ್ ನಟರಂಗ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಜ್ಯೂಡೋ ಸ್ಯಾಂಡಿ ಸಂಗೀತ, ಕಾರ್ತಿಕ್ ಎಸ್ ಛಾಯಾಗ್ರಹಣ ಸಿನಿಮಾಗಿದೆ. 'ಹಯಗ್ರೀವ' ಚಿತ್ರ ಕೆವಿಸಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗುತ್ತಿದೆ.