ಹೆಜ್ಜಾರು ಸಿನಿಮಾವನ್ನು ಹರ್ಷಪ್ರಿಯ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಭಗತ್ ಆಳ್ವ ನಾಯಕನಾಗಿ ಹಾಗೂ ಶ್ವೇತಾ ಲಿಯೋನಿಲ್ಲಾ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಕೃಷ್ಣ, ಅರುಣ ಬಾಲರಾಜ್, ಮುತ್ತುರಾಜು, ವಿನೋದ್ ಭಾರತಿ ತಾರಾಗಣದಲ್ಲಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಹಾಗೂ ಅಮರ್ ಗೌಡ ಛಾಯಾಗ್ರಹಣ ಸಿನಿಮಾಗಿದೆ. ಚಿತ್ರವನ್ನು ಗಗನ ಎಂಟರ್‌ಪ್ರೈಸಸ್ ಬ್ಯಾನರ್ ಅಡಿ ವಿಮಲ ಎನ್ ನಿರ್ಮಾಣ ಮಾಡಿದ್ದಾರೆ.