ಇಷ್ಕ್ ಸಿನಿಮಾವನ್ನು ವಿನಯ್ ರಾಘವೇಂದ್ರ ವಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಾಜು ತ್ಯಾಗರಾಜು ನಾಯಕನಾಗಿ ಹಾಗೂ ಶ್ವೇತಾ ಭಟ್ ಕಾರವಾರ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಚೇತನ್ ದುರ್ಗ, ಶಿಲ್ಪಾಶ್ರೀ ಶಾಂತಕುಮಾರ್, ಸೃಜನ್ ಬೆಳ್ಮಣ್ಣು, ಶಶಾಂಕ್ ರಾಘವೇಂದ್ರ ಮುಂತಾದವರು ತಾರಾಗಣದಲ್ಲಿದ್ದಾರೆ. ಶ್ರೀರಾಮ್ ಗಂಧರ್ವ ಸಂಗೀತ ಚಿತ್ರಕ್ಕಿದೆ.