ಜಿಂಗೋ ಸಿನಿಮಾವನ್ನು ಶಶಾಂಕ್ ಸೋಗಲ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ್ ನಾಯಕನಾಗಿ ನಟಿಸಿದ್ದಾರೆ. ನವನೀತ್ ಶ್ಯಾಮ್ ಹಂಟಿಂಗ್ ಬಿಜಿಎಂ, ರಾಹುಲ್ ರಾಯ್ ಛಾಯಾಗ್ರಹಣ ಸಿನಿಮಾಗಿದೆ. ಜಿಂಗೋ ಚಿತ್ರವನ್ನು ಡಾಲಿ ಪಿಕ್ಚರ್ ಹಾಗೂ ತ್ರಿಶೂಲ್ ವಿಕ್ಷನರಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಬಿ. ನಾಗೇಂದ್ರ ರೆಡ್ಡಿ ಹಾಗೂ ಧನಂಜಯ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಹಾರಿಸ್ ಅಹಮದ್ ಕತೆ ಚಿತ್ರಕಥೆ ಬರೆದಿದ್ದು, ರಾಘವೇಂದ್ರ ಮಾಯಕೊಂಡ ಇದೆ.
ಟೀಸರ್: ಜಿಂಗೋ ಚಿತ್ರದ ಟೀಸರ್ 2024ರ ಆಗಸ್ಟ್ 23ರಂದು ಬಿಡುಗಡೆಯಾಗಿದ್ದು, ಧನಂಜಯ್ ಕ್ರಾಂತಿಕಾರಿ ನಾಯಕನಾಗಿ ಅಬ್ಬರಿಸಿದ್ದಾರೆ. ಮಳೆಯನ್ನು ಲೆಕ್ಕಿಸದೇ 'ಜಿಂಗೋ' ಭಾಷಣ ಮಾಡುವ ಪರಿ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ವೇಳೆ ಮಾಡಿದ ಭಾಷಣವನ್ನು ನೆನಪಿಸುವಂತಿದೆ.
ಡೈಲಾಗ್: ದೊಡ್ಡ ದೊಡ್ಡ ಬಂದೂಕು, ಗನ್‌ಗಳನ್ನೆಲ್ಲಾ ಬಿಟ್ಟು 'ಜಿಂಗೋ' ಮೈಕ್ ಅನ್ನೇ ಆಯುಧ ಮಾಡಿಕೊಂಡು ಯುದ್ಧಕ್ಕೆ ನಿಂತಿದ್ದಾನೆ. ಇವತ್ತು ನಮ್ಮ ರಕ್ತದ ರುಚಿ ನೋಡಲು ವೈರಿಗಳು ನಮ್ಮ ನಿಮ್ಮ ನಡುವೆ ಇದ್ದಾವೆ. ಆದರೆ ಅಂತಹವರನ್ನು ನನ್ನ ಎದೆ ಒಡ್ಡಿ ಕಾಯ್ತೀನಿ. ನಾನು ಗಂಢಬೇರುಂಢನಾಗಿ ಹಾರ್ತಿದ್ರೆ ನನ್ನ ರೆಕ್ಕೆ ನೀವಾಗಿರಬೇಕು. ನಾನು ಬೆಂಕಿಯಾಗಿ ಉರೀತಿದ್ರೆ ಬೀಸೊ ಬಿರುಗಾಳಿ ನೀವಾಗಿರಬೇಕು. ಶಾಂತಿಯ ತೋಟದ ಮೇಲೆ ನಂಬಿಕೆ ಇಲ್ಲ, ನಾವು ಈಗ ಉತ್ತು ಬಿತ್ತಬೇಕಾಗಿರೋದು ಕ್ರಾಂತಿಯ ತೋಟ ಎನ್ನುವ ಸಿನಿಮಾದಲ್ಲಿದೆ.