ಜೂನಿ ಸಿನಿಮಾವನ್ನು ಹೊಸ ಪ್ರತಿಭೆ ವೈಭವ್ ಮಹಾದೇವ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ನಾಯಕನಾಗಿ ಹಾಗೂ ರಿಷಿಕಾ ನಾಯ್ಕ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಅವಿನಾಶ್, ಸುಧಾರಾಣಿ, ವಿನಯ ಪ್ರಸಾದ್, ಧನುಷ್ ರವೀಂದ್ರ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಸಿನಿಮಾವಾಗಿದ್ದು, ತ್ರಿಶೂಲ್ ಕ್ರಿಯೇಷನ್ ಅಡಿಯಲ್ಲಿ ಮೋಹನ್ ಕುಮಾರ್ ಎಸ್ ನಿರ್ಮಾಣ ಮಾಡಿದ್ದಾರೆ.
ಶ್ರೇಯಸ್ ವೈ ಎಸ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಚಿತ್ರಕ್ಕೆ ನಕುಲ್ ಅಭ್ಯಂಕರ್ ಸಂಗೀತ ಹಾಗೂ ಜಿತಿನ್ ದಾಸ್ ಛಾಯಾಗ್ರಹಣ ಮಾಡಿದ್ದಾರೆ. ಶಶಾಂಕ್ ನಾರಾಯಣ ಸಂಕಲನ, ನವೀನ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಯಾರ ಮೇಲೆ ಪ್ರೀತಿ ಹುಟ್ಟುತ್ತೋ, ಅವರ ಮೇಲೆ ಪ್ರೀತಿ ಆಗುತ್ತಾ?ಎಂಬ ಕಥೆಯ ಎಳೆ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.
ಬಿಡುಗಡೆ: ಜೂನಿ ಸಿನಿಮಾ 2024ರ ಫೆಬ್ರವರಿ 9ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.