ಕಾದಾಡಿ ಸಿನಿಮಾವನ್ನು ಸತೀಶ್ ಮಾಲೆಂಪಾಟಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅಕ್ಷಿತ್ ಶಶಿಕುಮಾರ್ ನಾಯಕನಾಗಿ ಮತ್ತು ನಾಯಕಿಯಾಗಿ ಲಾವಣ್ಯ ಸಾಹುಕಾರ ನಟಿಸುತ್ತಿದ್ದಾರೆ. ಚಾಂದಿನಿ ತಮಿಳರಸನ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇನ್ನುಳಿದಂತೆ ರಘು ರಾಮನಕೊಪ್ಪ. ರವಿ ಕಾಳೆ, ತೆಲುಗು ನಟರಾದ ಪೋಸಾನಿ ಕೃಷ್ಣ ಮುರಳಿ, ಶ್ರವಣ್ ರಾಘವೇಂದ್ರ, ತಮಿಳು ನಟಿ ಮಾರಿಮುತ್ತು ಸೇರಿದಂತೆ ಹಲವರು ನಟಿಸಿದ್ದಾರೆ. ಡಿ ಯೋಗಿ ಪ್ರಸಾದ್ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದು, ಭೀಮ್ ಸೀಸರೋಲಿಯೋ ಸಂಗೀತವಿರಲಿದೆ.