ಚಿತ್ರದ ನಾಯಕ ಕಾರ್ತಿಕ್ ತನ್ನ ತಾತನ ಮರಣದ ನಂತರ ಏಕಾಂಗಿ ಜೀವನ ನೆಡೆಸುತ್ತಿರುತ್ತಾನೆ.ಈ ಒಂಟಿತನದ ಜೀವನದಿಂದ ಬೇಸತ್ತ ಕಾರ್ತಿಕ್ ಹಲವು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುತ್ತಾನೆ. ಹೀಗೆ ಒಂದು ಸಲ ಮಾತ್ರೆ ಸೇವಿಸಿ ಆತ್ಮಹತ್ಯಗೆ ಪ್ರಯತ್ನಿಸಿದಾಗ ಚಿತ್ರದ ನಾಯಕ ಡಾಕ್ಟರ್ ಪ್ರಿಯಾ ಕಾಪಾಡುತ್ತಾಳೆ. ಇಲ್ಲಿಂದ ನಾಯಕನಿಗೆ ತನ್ನ ಬದುಕಿಸಿದ ಪ್ರಿಯಾ ಮೇಲೆ ಪ್ರೀತಿ ಮೂಡುತ್ತದೆ.
ಕಾರ್ತಿಕ್ ಒಂದು ವಿಶೇಷ ಶಕ್ತಿವಿರುತ್ತದೆ. ಅವನಿಗೆ ಆತ್ಮಗಳನ್ನು ನೋಡುವ ಶಕ್ತಿವಿರುತ್ತದೆ. ಇಲ್ಲಿ ಅವನಿಗೆ ನಾಲ್ಕು ಆತ್ಮಗಳು ಸ್ನೇಹಿತರಾಗಿ ಪ್ರಿಯಾಳನ್ನು ಒಳಿಸಿಕೊಳ್ಳಲು ಸಹಾಯ ಮಾಡುತ್ತವೆ. ಹೇಗೆ ಪ್ರಿಯಾಳ ಆಗಮನದಿಂದ ನಾಯಕನ ಬದುಕಲ್ಲಿ ಬದಲಾವಣೆಗಳಾಗುತ್ತವೆ ಎಂಬುದು ಚಿತ್ರದ ಕಥೆ.