ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಷನ್ ಕಬ್ಜ ಸಿನಿಮಾ 2023ರ ಮಾರ್ಚ್ 17ರಂದು ಬಿಡುಗಡೆಯಾಗಿತ್ತು. ಅದರ ಮುಂದಿನ ಭಾಗ ಕಬ್ಜ ಚಾಪ್ಟರ್ 2. ಕಬ್ಜ ಚಿತ್ರದಲ್ಲಿ ಉಪೇಂದ್ರ, ಕಿಚ್ಚ ಸುದೀಪ್, ಶಿವ ರಾಜ್‌ಕುಮಾರ್ ಮಾತ್ರವಲ್ಲದೆ ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ಸಹ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡ ಈಗಗಾಲೇ ಕಬ್ಜ 2 ಚಿತ್ರದ ಪೋಸ್ಟರ್ ರಿಲೀಸ್ ಮಾಡಿದೆ.
ಕಬ್ಜ 2 ಸಿನಿಮಾದಲ್ಲಿ ನಾಲ್ವರು ಸ್ಟಾರ್ ನಟರು ನಟಿಸಲಿದ್ದು, ಕನ್ನಡದ ಸ್ಟಾರ್ ನಟರು ಹಾಗೂ ತೆಲುಗಿನ ಸ್ಟಾರ್ ನಟ ಒಂದೇ ಸಿನಿಮಾದಲ್ಲಿ ನಟಿಸಲಿರುವ ಈ ಚಿತ್ರ ಸಿನಿಪ್ರೇಕ್ಷಕರಿಗೆ ಹೊಸ ಅನುಭವನೀಡಲಿದೆ. ಈ ಚಿತ್ರದ ಮೂಲಕ ಪವನ್ ಕಲ್ಯಾಣ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.