ಕೈಲಾಸ ಕಾಸಿದ್ರೆ ಸಿನಿಮಾವನ್ನು
ನಾಗ್ ವೆಂಕಟ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ
ರವಿ ಕಿರಣ್ ನರಸಿಂಹಲು ನಾಯಕನಾಗಿ ಹಾಗೂ
ಸುಕನ್ಯ ಗಿರೀಶ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಸೂರಜ್ ಕಾಮಿಡಿ ಕಿಲಾಡಿಗಳು, ನೀನಾಸಂ ಅಶ್ವತ್ಥ್, ಲೋಕೇಶ್ ಕೆವಿ, ಆಕರ್ಷ್ ಅಕ್ಕು ಮುಂತಾದವರು ತಾರಾಗಣದಲ್ಲಿದ್ದಾರೆ. ಆಶಿಕ್ ಅರುಣ್ ಸಂಗೀತ ನಿರ್ದೇಶನ, ತ್ಯಾಗರಾಜನ್ ಸಂಕಲನ, ಲೇಖಕ್ ಎಂ ಸಾಹಿತ್ಯ, ವಿನೋದ್ ರಾಜೇಂದ್ರನ್ ಛಾಯಾಗ್ರಹಣ ಹಾಗೂ ಧನಂಜಯ ಬಿ ನೃತ್ಯ ನಿರ್ದೇಶನ ಸಿನಿಮಾಗಿದೆ. ಈ ಸಿನಿಮಾವನ್ನು ವಾಸಿಕ್ ಅಲ್ಸಾದ್ ನಿರ್ಮಾಣ ಮಾಡಿದ್ದಾರೆ.