ಕಣ್ಣಾಮುಚ್ಚೆ ಕಾಡೇ ಗೂಡೇ ಸಿನಿಮಾವನ್ನು ನಟರಾಜ್ ಕೃಷ್ಣೇಗೌಡ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್, ಅಥರ್ವ್ ಪ್ರಕಾಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಅರವಿಂದ್ ಬೋಳಾರ್, ಪ್ರಾರ್ಥನಾ ಸುವರ್ಣ, ರವಿ ರಾಮಕುಂಜ, ದೀಪಕ್ ರೈ ಪಣಾಜೆ ಮುಂತಾದವರು ತಾರಾಗಣದಲ್ಲಿದ್ದಾರೆ. ದೀಪಕ್ ಕುಮಾರ್ ಈ ಸಿನಿಮಾ ಛಾಯಾಗ್ರಹಣ ಮಾಡಿದ್ದಾರೆ.