ಟಿ.ಎನ್.ನಾಗೇಶ್ ನಿರ್ದೇಶನದಲ್ಲಿ ಮೂಡಿಬಂದ 'ಖಡಕ್' ಚಿತ್ರದಲ್ಲಿ ಧರ್ಮ ಕೀರ್ತೀರಾಜ್ ಮತ್ತು ಅನುಷಾ ರೈ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಎಸ್ ವಲ್ಲಿ ಮತ್ತು ಸಿಂಗಾಪುರ ಸಿದ್ಧರಾಮಯ್ಯ ಬಂಡವಾಳ ಹೂಡಿದ್ದಾರೆ. ಕೃಪಾಕರ್ ಸಂಗೀತ ನೀಡಿದ್ದಾರೆ.
ಕಥೆ
ಧರ್ಮ್ ಮೇಜರ್ ಸೂರ್ಯಕಾಂತ್ ಮಗ. ಸೂರ್ಯಕಾಂತ್ ಸೈನ್ಯದ ರಹಸ್ಯಗಳನ್ನು ಮಾರಲು ನಿರಾಕರಿಸಿದಾಗ, ಅವನ ಮಗನ ಮುಂದೆಯೇ ಅವನ ಕೊಲೆಯಾಗುತ್ತದೆ. ಮುಂದೆ ತನ್ನ ತಂದೆಯ ಕೊಲೆಗಾರನ ವಿರುದ್ಧ ಸೇಡು ತೀರಿಸಿಕೊಳ್ಳಲು, ಧರ್ಮ ಪೋಲಿಸ್ ಇಲಾಖೆಗೆ ಸೇರುತ್ತಾನೆ. ಅವನ ತನ್ನ ತಂದೆಯ ಕೊಲೆಗಾರನಿಗೆ ಹೇಗೆ ಶಿಕ್ಷಿಸುತ್ತಾನೆ ಎಂಬುದು ಚಿತ್ರದ ತಿರುಳು.