ಅಜಯ್ ಒಬ್ಬ ಪ್ರಸಿದ್ಧ ಆರ್ಕಿಟೆಕ್ಚ್ ಇಂಜಿನಿಯರ್. ತನ್ನ ಪತ್ನಿ ನೈನಾಳೊಂದಿಗೆ ಆರಾಮದಾಯಕವಾದ ಬದುಕನ್ನು ನೆಡೆಸುತ್ತಿರುತ್ತಾನೆ ಆದರೆ ನೈನಾಗೆ ಮಾತ್ರ ಅಮೇರಿಕಾಕ್ಕೆ ಹೋಗಿ ನೆಲಸಬೇಕಂಬ ಆಸೆ. ಅದಕ್ಕೆ ಅಜಯ್ ಗೆ ಇಲ್ಲಿನ ತಮ್ಮೆಲ್ಲಾ ಪ್ರಾಪರ್ಟಿ ಮಾರಿ ಅಮೇರಿಕಾದಲ್ಲಿ ನೆಲೆಸುವಂತೆ ಒತ್ತಾಯಿಸುತ್ತಿರುತ್ತಾಳೆ. ಆದರೆ ಅಜಯ್ ಗೆ ಅದು ಇಷ್ಟವಿರುವುದಿಲ್ಲ.
ಇದೇ ಸಮಯದಲ್ಲಿ ನೈನಾ, ರಂಜಿತ್ ಎಂಬ ವೈದ್ಯನ ಜೊತೆ ಅಕ್ರಮ ಸಂಬಂಧ ಹೊಂದುತ್ತಾಳೆ. ರಂಜಿತ್ ಮತ್ತು ನೈನಾ ತಮ್ಮ ದಾರಿಗೆ ಅಡ್ಡವಾಗಿರುವ ಅಜಯ್ ನನ್ನು ಮುಗಿಸಲು ಪ್ರಯತ್ನಿಸುತ್ತಾರೆ. ಇವರ ಪ್ರಯತ್ನ ಯಶಸ್ವಿಯಾಗುತ್ತಾ ? ಅಥವಾ ಅಜಯ್ ಗೆ ಇವರಿಬ್ಬರ ಬಗ್ಗೆ ತಿಳಿಯುತ್ತಾ ಎನ್ನುವುದು ಚಿತ್ರದ ಕಥೆ.