ಎ.ಪಿ.ಅರ್ಜುನ್ ನಿರ್ದೇಶನಲದಲ್ಲಿ ಮೂಡಿ ಬಂದಿರುವ ಕಿಸ್ ಚಿತ್ರದಲ್ಲಿ ವಿರಾಟ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅರ್ಜುನ್ ನಿರ್ದೇಶನದೊಂದಿಗೆ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಶ್ರೀ ಲೀಲಾ ನಾಯಕಿ. ವಿ ಹರಿಕೃಷ್ಣ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಪುನೀತ್ ರಾಜಕುಮಾರ್, ಚಂದನ್ ಶೆಟ್ಟಿ, ಶ್ರೇಯಾ ಘೋಷಾಲ್ ಮುಂತಾದವರ ಕಂಠಸಿರಿಯಲ್ಲಿ ಮೂಡಿ ಬಂದಿವೆ.ಚಿತ್ರದ ಟ್ರೇಲರ್ ನ್ನು ಆಗಸ್ಟ್ 23,2019 ರಂದು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದರು.
ನಂದಿನಿ ಆಧುನಿಕ ಹುಡುಗಿಯಾದರೂ ಸಾಂಪ್ರದಾಯಿಕ ಮೌಲ್ಯಗಳಿಗೆ ಬೆಲೆ ಕೊಡುವವಳು. ಅರ್ಜುನ್ ಒಬ್ಬ ಕೇರ್ ಫ್ರೀ ಶ್ರೀಮಂತ ಹುಡುಗ. ತಾನು ಇಷ್ಟ ಪಡುವ ನಂದಿನಿಯನ್ನು ಪಡೆಯಲು ಅರ್ಜುನ್ ಯಾವ ಹಂತಕ್ಕೆ ಹೋಗಬಲ್ಲನು ಎಂಬುದು ಚಿತ್ರದ ಕಥೆ. ಹದಿಹರೆಯದ ಮುಗ್ಧ ಹಾಗೇ ಹುಚ್ಚ ಪ್ರೀತಿಯ ದರ್ಶನವನ್ನು ಕಿಸ್ ಚಿತ್ರ ಮಾಡಿಸುತ್ತದೆ.ನಾಯಕ, ನಾಯಕಿ ನಡುವೆ ಹೀಗೊಂದು ಕರಾರು ಆಗುತ್ತದೆ. 72 ದಿನಗಳ ಕಾಲ ನಂದಿನಿ (ಶ್ರೀ ಲೀಲಾ), ಅರ್ಜುನ್ (ವಿರಾಟ್)ಗೆ ಸೇವಕಿಯಾಗಿ ಕೆಲಸ ಮಾಡಿಕೊಂಡು ಇರಬೇಕಾಗುತ್ತದೆ. ಈ ಕಾಲವಧಿಯಲ್ಲಿ ಇವರಿಬ್ಬರ ನಡುವೆ ಪ್ರೇಮಕಥೆ ಶುರು ಆಗುತ್ತದೆ. ಸಿನಿಮಾದ ಕೊನೆಯವರೆಗೆ ಒನ್ ವೇ ಆಗಿರುವ ಲವ್ ಸ್ಟೋರಿ ಕಡೆ ಘಳಿಗೆಯಲ್ಲಿ ಏನಾಗುತ್ತದೆ ಎನ್ನುವುದು ಚಿತ್ರದ ಸ್ಟೋರಿ ಲೈನ್.