ಕೋಳಿ ತಾಳ್ ಸಿನಿಮಾವನ್ನು ಅಭಿಲಾಶ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದಾರೆ. ಚಿತ್ರದಲ್ಲಿ ಹಿರಿಯ ನಟರಾದ ರಾಧಾ ರಾಮಚಂದ್ರ ಹಾಗೂ ಪ್ರಭಾಕರ್ ಕುಂದರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಗಣೇಶ್ ಎಂ. ಗುರುಪ್ರಸಾದ್, ಶರತ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಕುಂದಾಪುರ ಭಾಷೆ ಬಳಸಿಕೊಂಡು ಈ ಸಿನಿಮಾ ಮಾಡಲಾಗಿದೆ.