ಹರಿಕೃಷ್ಣ .ಎಸ್ ನಿರ್ದೇಶನದ 'ಕೋಣ' ಚಿತ್ರದಲ್ಲಿ ಕೋಮಲ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಬಿ. ವಿನೋದ್ ಕುಮಾರ್ ಹಾಗೂ ಸೆಲ್ವಾ ಬಂಡವಾಳ ಹೂಡಿದ್ದು, ತೇಜ್‌ವಿನ್ ಪ್ರೊಡಕ್ಷನ್ಸ್ ಹಾಗೂ ರೀಲ್ ಸ್ಟುಡಿಯೋಸ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿವೆ. ಎ2 ಮ್ಯೂಸಿಕ್ ಸಂಸ್ಥೆ ಕೂಡ ಕೈ ಜೋಡಿಸಿದೆ. ಶಶಾಂಕ್ ಶೇಷಗಿರಿ ಸಂಗೀತ ಹಾಗೂ ವಿನೋದ್ ಕುಮಾರ್ ಛಾಯಾಗ್ರಹಣ ಇರಲಿದೆ.
ಫಸ್ಟ್ ಲುಕ್: ಸಿನಿಮಾದ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಕೋಣವೊಂದು ಓಡುತ್ತಿದ್ದು ಅದರ ಹಿಂದೆ ಊರಿನ ಜನ ಪಂಚು, ಕತ್ತಿ, ಭರ್ಜಿ ಹಿಡಿದು ಹಿಂದೆ ಓಡುತ್ತಿರುವಂತೆ ಡಿಸೈನ್ ಮಾಡಲಾಗಿದೆ. ಇದನ್ನು ಗಮನಿಸಿದರೆ ಸಿನಿಮಾದ ಕಥೆ ಕೋಣದ ಸುತ್ತಾ ಸುತ್ತುತ್ತದೆ ಎಂಬುದನ್ನು ಗಮನಿಸಬಹುದು.
ಪ್ಯಾನ್ ಇಂಡಿಯಾ: ಕೋಣ ಸಿನಿಮಾವನ್ನು 5 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿದೆ.