ಹಿನ್ನಲೆ- ಸಿದ್ದು ಪೂರ್ಣಚಂದ್ರ ನಿರ್ದೇಶನದ ಥ್ರಿಲ್ಲರ್ ಚಿತ್ರ `ಕೃಷ್ಣ ಗಾರ್ಮೆಂಟ್ಸ್' ನಲ್ಲಿ ರಶ್ಮಿತ್, ಚಂದು ಗೌಡ, ವರ್ಧನ್ ತೀರ್ಥಹಳ್ಳಿ ಮತ್ತು ರಾಜೇಶ್ ನಟರಂಗ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.ಷಣ್ಮುಖ ಜಿ ಬೆಂಡಿಗೇರಿ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ರಘು ಧನ್ವಂತರಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದ ಕತೆ ಒಂದು ಕೊಲೆಯ ಸುತ್ತ ಸುತ್ತುತ್ತದೆ. ಚಿತ್ರದ ಕಥೆ ಕೋರ್ಟ್ ರೂಮಿನಲ್ಲಿ ವಿಚಾರಣೆಯೊಂದಿಗೆ ಆರಂಭವಾಗುತ್ತದೆ.
ಕಥೆ- ಒಂದು ಪುಟ್ಟ ಹಳ್ಳಿಯಲ್ಲಿ ಇಬ್ಬರು ಯುವ ಪ್ರೇಮಿಗಳು. ಹಳ್ಳಿಯಲ್ಲಿ ತಮ್ಮ ಮದುವೆಗೆ ಕಠಿಣವಾಗುವುದೆಂದು ಅರಿತು ಇಬ್ಬರು ಮನೆ ಬಿಟ್ಟು ಬೆಂಗಳೂರಿಗೆ ಓಡಿ ಬರಲು ನಿರ್ಧರಿಸುತ್ತಾರೆ. ಕಡೆಗೆ ಬೆಂಗಳೂರಿಗೆ ಬಂದು ತಮ್ಮ ಹೊಸಜೀವನ ಕಟ್ಟಿ ಕೊಳ್ಳಲು ಆರಂಭಿಸುತ್ತಾರೆ. ಹುಡುಗ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಲು ಆರಂಭಿಸಿದರೆ, ಹುಡುಗಿ ಒಂದು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರುತ್ತಾಳೆ. ಗಾರ್ಮೆಂಟ್ ಫ್ಯಾಕ್ಟರಿಯ ಮಾಲೀಕನ ಕಣ್ಣು ಹುಡುಗಿಯ ಮೇಲೆ ಬೀಳುತ್ತದೆ. ಅವನ ಕಾಕದೃಷ್ಟಿಯಿಂದ ಪಾರಾಗಿ ಬದುಕಬೇಕೆನ್ನುವಷ್ಟರಲ್ಲಿ ಒಂದು ಕೊಲೆಯ ಸುಳಿಯಲ್ಲಿ ಸಿಲುಕಿ ಬೀಳುತ್ತಾರೆ. ಯಾರ ಕೊಲೆ ನೆಡೆಯುತ್ತದೆ? ಯಾರು ಕೊಲೆ ಮಾಡಿದವರು? ಈ ಕೊಲೆಯ ಸುಳಿಯಿಂದ ಈ ಯುವದಂಪತಿ ಹೇಗೆ ಪಾರಾಗುತ್ತಾರೆ ಎನ್ನುವುದು ಚಿತ್ರದ ಕಥೆ.