ಲ್ಯಾಂಡ್‌ಲಾರ್ಡ್ ಸಿನಿಮಾವನ್ನು
ಜಡೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಇದು
ದುನಿಯಾ ವಿಜಯ್ ಅವರ 29ನೇ ಸಿನಿಮಾ. ಈ ಸಿನಿಮಾ ಮೂಲಕ ವಿಜಯ್ ದೊಡ್ಡಮಗಳು
ಮೋನಿಕಾ ರಿತನ್ಯಾ ಆಗಿ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ಈ ಸಿನಿಮಾವನ್ನು ಕೆ.ವಿ ಸತ್ಯಪ್ರಕಾಶ್ 'ಸಾರಥಿ ಫಿಲಂಸ್' ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ.
ಪೋಸ್ಟರ್ ರಿಲೀಸ್: ಲ್ಯಾಂಡ್‌ಲಾರ್ಡ್ ಚಿತ್ರದ ಪೋಸ್ಟರ್ ಅನ್ನು ವಿಜಯ್ ಹುಟ್ಟುಹಬ್ಬದ ಪ್ರಯುಕ್ತ 2024, ಜನವರಿ 19ರಂದು ಬಿಡುಗಡೆ ಮಾಡಲಾಗಿದೆ. ಪೋಸ್ಟರ್‌ನಲ್ಲಿ ಒಂದು ಕಡೆಗೆ ಕಪ್ಪು ಬೇಟೆ ನಾಯಿಯಿದೆ. ಮತ್ತೊಂದು ಕಡೆ ಹುಲಿಯಿದೆ. ಹುಲಿ ಮತ್ತು ಬೇಟೆ ನಾಯಿಯ ಮುಖಾಮುಖಿಯಾಗಿ ಕಾದಾಡುತ್ತಿರುವ ಹಾಗಿದೆ. ಜೊತೆಗೆ ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ ಅಂತಲೇ ಬರೆಯಲಾಗಿದೆ. ಹೀಗಾಗಿ ಇದೊಂದು ಶೋಷಣೆಯ ಕಥೆ ಹೊಂದಿರುವ ಸಿನಿಮಾ ಎನ್ನಲಾಗಿದೆ.
ಮೂಹೂರ್ತ: ಲ್ಯಾಂಡ್‌ಲಾರ್ಡ್ ಸಿನಿಮಾದ ಮುಹೂರ್ತ ಸಮಾರಂಭ ಮಹಾಲಕ್ಷ್ಮೀ ಪುರದ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ 2024ರ ಏಪ್ರಿಲ್ 11ರಂದು ನೆವೇರಿತು.