ಲೈಫ್ ಆಫ್ ಮೃದುಲ ಸಿನಿಮಾವನ್ನು ಚೇತನ್ ತ್ರಿವೇಣ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪೂಜಾ ಲೋಕಾಪುರ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಆಶಾ ಸುಜಯ್, ಕುಲದೀಪ್, ಶಶಾಂಕ್, ಯೋಗಿ ದೇವಗಂಗೆ, ಅನೂಪ್ ಥಾಮಸ್, ಶರೀಫ್, ಪ್ರೀತಿ ಚಿದಾನಂದ್ ಮುಂತಾದವರು ತಾರಾಗಣದಲ್ಲಿದ್ದಾರೆ. ರಾಹುಲ್ ಎಸ್. ವಾಸ್ತರ್ ಸಂಗೀತ, ಅಚ್ಚು ಸುರೇಶ್ ಛಾಯಾಗ್ರಹಣ ಹಾಗೂ ವಸಂತ ಕುಮಾರ್ ಕೆ ಸಂಕಲನ ಸಿನಿಮಾಗಿದೆ. ಬಹುತೇಕ ಹೊಸಬರೇ ಸೇರಿಕೊಂಡು ಈ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. 'ಮದನ್ ಮೂವೀಸ್' ಮೂಲಕ ಮದನ್ ಕುಮಾರ್ ಸಿ. ನಿರ್ಮಾಣ ಮಾಡಿದ್ದಾರೆ.