ಸಸ್ಪೆನ್ಸ್, ಥ್ರಿಲ್ಲರ್ 'ಮರೀಚಿ' ಸಿನಿಮಾಗೆ ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ, ಒಂದಿಷ್ಟು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಸಿದ್ದ್ರುವ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ವಿಜಯ್ ರಾಘವೇಂದ್ರ ನಾಯಕನಾಗಿ ಹಾಗೂ ಸೋನು ಗೌಡ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಅಭಿದಾಸ್, ಸ್ಪಂದನಾ ಸೋಮಣ್ಣ, ಗೋಪಾಲ್ ಕೃಷ್ಣ ದೇಶಪಾಂಡೆ, ಆರ್ಯನ್, ಶ್ರುತಿ ಪಾಟೀಲ್, ಅರುಣ್ ಬಾಲಾರಾಜ್ ಮುಂತಾದವರು ತಾರಾಗಣದಲ್ಲಿದ್ದಾರೆ. ಜ್ಯೂಡೋ ಸ್ಯಾಂಡಿ ಸಂಗೀತ ಹಾಗೂ ಮನೋಹರ್ ಜೋಶಿ ಛಾಯಾಗ್ರಹಣ ಸಿನಿಮಾದಲ್ಲಿದೆ. ನಿರ್ದೇಶಕ ಸಿದ್ದ್ರುವ್ ಮತ್ತು ಸಂತೋಷ್ ಮಾಯಾಪ್ಪ ಮರೀಚಿ ಚಿತ್ರವನ್ನು ಎಸ್.ಎಸ್ ರೆಕ್ ಬ್ಯಾನರ್ ಅಡಿ ನಿರ್ಮಾಣ ಮಾಡಿದ್ದಾರೆ.