ಮಠ (2006)(U)
Release date
10 Feb 2006
genre
ಮಠ ಕಥೆ
ಮಠ ಚಿತ್ರದಲ್ಲಿ ಜಗ್ಗೇಶ್ ನಾಯಕನಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಮಂಡ್ಯ ರಮೇಶ್, ಬಿರಾದರ್, ತಬಲಾ ನಾಣಿ, ಸಾಧು ಕೋಕಿಲ, ದೊಡ್ಡಣ್ಣ, ಗಿರೀಶ್ ಶಿವಣ್ಣ, ನಾಗತಿಹಳ್ಳಿ ಚಂದ್ರಶೇಖರ್, ಗುರು ಪ್ರಸಾದ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.ಗುರುಪ್ರಸಾದ್ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರಕ್ಕೆ ವಿ ಮನೋಹರ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಮಠ-ಮಾನ್ಯಗಳಲ್ಲಿ ನೆಡೆಯುವ ಬೆಳವಣಿಗೆಗಳನ್ನು ಹಾಸ್ಯದ ಕನ್ನಡಿ ಮೂಲಕ ತೋರಿಸಿದ ಚಿತ್ರ ಮಠ. ಚಿತ್ರದಲ್ಲಿ ಮುಖ್ಯ ಕಥೆಯ ಜೊತೆಗೆ ಹಲವು ಉಪಕಥೆಗಳು ಬರುತ್ತವೆ. ಮನುಷ್ಯನಲ್ಲಿರುವ ಅವಗುಣಗಳನ್ನು ದಾಟುವ ಬಗೆಯನ್ನು ಒಂದು ಆಲಸಿ ಯುವಕ ತಂಡದ ಮೂಲಕ ತೋರಿಸಿಕೊಟ್ಟಿತು.
**Note:Hey! Would you like to share the story of the movie ಮಠ with us? Please send it to us (popcorn@oneindia.co.in).