ತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಜೋಡಿಯಾಗಿ ನಟಿಸಿರುವ 'ಮತ್ತೆ ಮದುವೆ' ಸಿನಿಮಾವನ್ನು ಎಂ.ಎಸ್.ರಾಜು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಜಯಸುಧಾ ಮತ್ತು ಶರತ್ ಬಾಬು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮಧ್ಯ ವಯಸ್ಸಿನಲ್ಲಿ ನಡೆಯುವ ಮತ್ತೆ ಮದುವೆ ಚಿತ್ರಕಥೆಯನ್ನ ಅದ್ದೂರಿಯಾಗಿ ನಿರ್ಮಿಸಲಾಗಿದ್ದು, ಪ್ರತಿಷ್ಠಿತ ವಿಜಯ ಕೃಷ್ಣ ಮೂವೀಸ್ ಬ್ಯಾನರ್ ಅಡಿ ಈ ಸಿನಿಮಾ ಮೂಡಿಬಂದಿದೆ. ತೆಲುಗಿನಲ್ಲಿ ಮಳ್ಳಿ ಪೆಳ್ಳಿ ಹಾಗೂ ತೆಲುಗಿನಲ್ಲಿ ಮತ್ತೆ ಮದುವೆ ಎಂಬ ಟೈಟಲ್‌ನಲ್ಲಿ ಸಿನಿಮಾ ಮೂಡಿಬಂದಿದೆ.
ಕಥೆ: ಮಧ್ಯವಯಸ್ಸಿನಲ್ಲಿ ಪ್ರೀತಿಯಿಂದ ವಂಚಿತರಾಗುವ ಜೋಡಿ, ಹೇಗೆ ನಡುವಯಸ್ಸಿನಲ್ಲಿ ಪ್ರೀತಿಯನ್ನು ಕಂಡುಕೊಂಡು ಎಂಬುದು ಚಿತ್ರದ ಕಥೆ. ಮೂಲಗಳ ಪ್ರಕಾರ ನರೇಶ್ ತಮ್ಮದೇ ಕಥೆಯನ್ನು ಸಿನಿಮಾ ಮಾಡಿದ್ದಾರೆ.
ಬಿಡುಗಡೆ: ಮತ್ತೆ ಮದುವೆ ಸಿನಿಮಾ 2023ರ ಮೇ 26ರಂದು ತೆಲುಗಿನಲ್ಲಿ ಬಿಡುಗಡೆಯಾಗಿತ್ತು. ಕನ್ನಡದಲ್ಲಿ ಜೂನ್ 9ರಂದು ಬಿಡುಗಡೆಯಾಯಿತು.