ಮ್ಯಾಕ್ಸ್ ಸಿನಿಮಾವನ್ನು ಹೊಸಪ್ರತಿಭೆ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ 46ನೇ ಚಿತ್ರ ಇದಾಗಿದ್ದು, ಸಂಯುಕ್ತ ಹೊರನಾಡು, ವರಲಕ್ಷ್ಮೀ ಶರತ್‌ಕುಮಾರ್, ರವಿಶಂಕರ್ ಪಿ, ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ಅರ್ಜುನ್ ಬಿ.ಆರ್, ಸುಕೃತಾ ವಾಗ್ಲೆ, ಸುಧಾ ಬೆಳವಾಡಿ, ತೆಲುಗು ನಟ ಸುನೀಲ್, ನರೇನ್, ಕಾಲಕೇಯ ಪ್ರಭಾಕರ್, ಕರಿಸುಬ್ಬು, ವಿಜಯ್ ಚೆಂಡೂರ್ ಮುಂತಾದವರು ತಾರಾಗಣದಲ್ಲಿದ್ದಾರೆ. ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಶೇಖರ್ ಚಂದ್ರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಹಾಗೂ ಗಣೇಶ್ ಬಾಬು ಸಂಕಲನ ಚಿತ್ರಕ್ಕಿದೆ.
ಕಥೆ: ಮ್ಯಾಕ್ಸ್ ಅಲಿಯಾಸ್ ಅರ್ಜುನ್ ಮಹಾಕ್ಷಯ್. ತನ್ನ ವೃತ್ತಿ ಜೀವನದಲ್ಲಿ ಹೆಚ್ಚು ಬಾರಿ ಅಮಾನತಿನಲ್ಲೇ ಇದ್ದ ಪೊಲೀಸ್ ಅಧಿಕಾರಿ. ಇವರನ್ನು ಶಾರ್ಟ್ ಅಂಡ್ ಸ್ವೀಟ್ ಆಗಿ 'ಮ್ಯಾಕ್ಸ್' ಅಂತ ಕರೀತಾರೆ. ನಟೋರಿಯಸ್ ಗ್ಯಾಂಗ್‌ಗೂ 'ಮ್ಯಾಕ್ಸ್' ಅಂತಲೇ ಪರಿಚಯ. ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳಬಹುದು. ಆದರೆ, 'ಮ್ಯಾಕ್ಸ್' ಅನ್ನೋ ಹೆಸರು ಕೇಳಿದರೆ ಎಷ್ಟೇ ಖತರ್‌ನಾಕ್ ಗ್ಯಾಂಗ್ ಇದ್ದರೂ ನಡುಗುತ್ತೆ. ಆ ಮಟ್ಟಿಗೆ ಭಯ ಹುಟ್ಟಿಸಿರುವ ಪೊಲೀಸ್ ಅಧಿಕಾರಿ.
ಅಮಾನತಿನಲ್ಲಿದ್ದ ಪೊಲೀಸ್ ಅಧಿಕಾರಿ 'ಮ್ಯಾಕ್ಸ್' ಅಲಿಯಾಸ್ ಅರ್ಜುನ್ ಮಹಾಕ್ಷಯ್ ಹೊಸ ಸ್ಟೆಷನ್‌ಗೆ ವರ್ಗಾವಣೆಯಾಗುತ್ತೆ. ಆ ಊರಿಗೆ ಕಾಲಿಡುತ್ತಿದ್ದಂತೆ ಅಲ್ಲಿನ ನಟೋರಿಯಸ್ ಗ್ಯಾಂಗ್‌ನಿಂದ ಒಂದು ಅವಘಡ ನಡೆದು ಹೋಗುತ್ತೆ. ಮಾರನೇ ದಿನ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಬೇಕಿದ್ದ ಮ್ಯಾಕ್ಸ್ ಹಿಂದಿನ ರಾತ್ರಿಯಿಂದಲೇ ಕಾರ್ಯೋನ್ಮುಖರಾಗುತ್ತಾರೆ. ಪ್ರಭಾವಿ ಮಂತ್ರಿಗಳ ಮಕ್ಕಳಿಬ್ಬರನ್ನು ಸ್ಟೇಷನ್‌ಗೆ ಹಾಕುತ್ತಾನೆ. ಆದರೆ, ಸ್ಟೇಷನ್ ಒಳಗೆ ಅವರಿಬ್ಬರು ಸಾವನ್ನಪ್ಪುತ್ತಾರೆ. ಅಲ್ಲಿಂದ ಮುಂದೆ 'ಮ್ಯಾಕ್ಸ್' ಈ ಕೇಸ್ ಅನ್ನು ಹೇಗೆ ತೆಗೆದುಕೊಂಡು ಹೋಗುತ್ತಾನೆ ಅನ್ನೋದು ಥ್ರಿಲ್.
ಬಿಡುಗಡೆ: ಮ್ಯಾಕ್ಸ್ ಸಿನಿಮಾ 2024ರ ಡಿಸೆಂಬರ್ 25ರಂದು ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಯಿತು.