'ಮಾಂಕ್ ದಿ ಯಂಗ್' ಸಿನಿಮಾವನ್ನು ಮಾಸ್ಚಿತ್ ಸೂರ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಯುವನಟ ಸರೋವರ್ ನಾಯಕನಾಗಿ ಮತ್ತು ಸೌಂದರ್ಯ ಗೌಡ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಉಷಾ ಭಂಡಾರಿ, ಶಿವಪ್ಪ, ಪ್ರಣಯ ಮೂರ್ತಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ನಿವೃತ್ತ ಆರ್ಮಿ ಆಫೀಸರ್ ರಾಜೇಂದ್ರನ್, ವಿನಯ್ ಬಾಬು ರೆಡ್ಡಿ, ಸರೋವರ್, ಗೋಪಿಚಂದ್, ಲಾಲ್ ಚಂದ್ ಖತಾರ್ ಐದು ಮಂದಿ ಸೇರಿ ಈ ಸಿನಿಮಾ ನಿರ್ಮಿಸಿದ್ದಾರೆ. ಕಾರ್ತಿಕ್ ಶರ್ಮಾ ಛಾಯಾಗ್ರಹಣ ಚಿತ್ರಕ್ಕಿದೆ.