ಮಯೂರಿ ಮುಖ್ಯಪಾತ್ರದಲ್ಲಿ ನಟಿಸಿರುವ `ಮೌನಂ' ಚಿತ್ರವನ್ನು ರಾಜಪಂಡಿತ್ ನಿರ್ದೇಶಿಸುತ್ತಿದ್ದಾರೆ. ಶ್ರೀಹರಿ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ಮಯೂರಿಗೆ ಅಕಿಲಾ ಪ್ರಕಾಶ್, ಕಾಮಿಡಿ ಕಿಲಾಡಿಗಳು ನಯನಾ, ಅವಿನಾಶ,ಕೆಂಪೇಗೌಡ, ಹನುಮಂತೇ ಗೌಡ ಸಾಥ್ ನೀಡಲಿದ್ದಾರೆ.
ನಿಶಬ್ಧಕ್ಕೂ ಶಬ್ದವಿದೆ ಎಂಬ ಅಡಿಬರಹ ಹೊಂದಿರುವ ಈ ಚಿತ್ರಕ್ಕೆ ಆರವ್ ರಿಷಿಕ್ ಸಂಗೀಥ ನೀಡುತ್ತಿದ್ದಾರೆ. ಚಿತ್ರದ ಫರ್ಸ್ಟ್ ಲುಕ್ 2019 ಜೂನ್ 4 ರಂದು ಬಿಡುಗಡೆಯಾಯಿತು.