ರವೀಂದ್ರ ವೆಂಶಿ ಚಿತ್ರಕಥೆ, ಸಂಭಾಷಣೆ ಬರೆದು, ನಿರ್ದೇಶಿಸುರುವ ' ನೈಟ್ ಕರ್ಫ್ಯೂ' ಚಿತ್ರವನ್ನು ಬಿ.ಎಸ್. ಚಂದ್ರಶೇಖರ್ ತಮ್ಮ ಸ್ವರ್ಣಗಂಗಾ ಫಿಲಂಸ್ ಭ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಐದು ವರ್ಷಗಳ ನಂತರ ಆ್ಯಕ್ಸನ್ ಕ್ವೀನ್ ಮಾಲಾಶ್ರೀ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ರಂಜನಿ ರಾಘವನ್ ವೈದ್ಯೆಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಮಂಜು ಪಾವಗಡ, ವರ್ಧನ್, ಪ್ರಮೋದ್ ಶೆಟ್ಟಿ, ಬಲ ರಾಜ್ವಾಡಿ, ಸಾಧು ಕೋಕಿಲ ಮುಂತಾದ ಬಹು ದೊಡ್ಡ ತಾರಾಗಣವಿದೆ.
ಕಥೆ: ಇದೊಂದು ನಿಜ ಘಟನೆಗಳ ಆಧಾರಿತ ಚಿತ್ರವಾಗಿದೆ. ಕರೋನಾ ಲಾಕ್ ಡೌನ್ ಸಮಯದಲ್ಲಿ ನೈಟ್ ಕರ್ಫ್ಯೂ ಹೇರಿದ್ದಾಗ ಒಂದು ರಾತ್ರಿಯಲ್ಲಿ ನೆಡೆಯುವ ಘಟನೆಗಳೇ ಈ ಚಿತ್ರದ ಕತೆ. ಮೆಡಿಕಲ್ ಮಾಫಿಯಾದ ಮೇಲೆ ಈ ಚಿತ್ರ ಬೆಳಕು ಚೆಲ್ಲಲಿದೆ.