ಡಿ ರಾಜೇಂದ್ರ ಬಾಬು ನಿರ್ದೇಶನದಲ್ಲಿ ಮೂಡಿಬಂದ ಒಲವಿನ ಉಡುಗೊರೆ ಚಿತ್ರದ ನಟನೆಗಾಗಿ ಅಂಬಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು. ತಮಿಳು ನಟಿ ಇಳವರಿಸಿ (ಕನ್ನಡದಲ್ಲಿ: ಮಂಜುಳಾ ಶರ್ಮಾ) ನಾಯಕಿಯಾಗಿ ದ್ವಿಪಾತ್ರದಲ್ಲಿ ನಟಿಸಿದರು.ಆರ್.ಎನ್.ಜಯಗೋಪಾಲ್ ರ ಹಾಡುಗಳಿಗೆ ರಂಗಾರಾವ್ ಸಂಗೀತ ನೀಡಿದರು.
ವೈದ್ಯಕೀಯ ವಿಧ್ಯಾರ್ಥಿಯೊಬ್ಬ ಆಕಸ್ಮಿಕವಾಗಿ ಮುಖ ಸುಟ್ಟುಕೊಂಡಾಗ ಅವನ ಪ್ರೇಯಸಿ ದೂರವಾಗುತ್ತಾಳೆ..ನಂತರ ಇವನ ಬಾಳಲ್ಲಿ ಬರುವ ಪ್ರೇಯಸಿಯ ತದ್ರೂಪ ಸಹೋದರಿ ಏನೆಲ್ಲ ಬದಲಾವಣೆ ತರುತ್ತಾಳೆ ಎನ್ನುವುದು ಚಿತ್ರದ ಕಥೆ.