ಮಂಗಳೂರಿನ ಬೋಳು ತಲೆಯ ಜನಾರ್ಧನ್ (ರಾಜ್.ಬಿ.ಶೆಟ್ಟಿ) ಗೆ ಸುಂದರ ಯುವತಿಯನ್ನ ಮದುವೆ ಆಗುವ ಆಸೆ. ಆದ್ರೆ, ತಲೆ ಮೇಲೆ ಕೂದಲು ಇಲ್ಲದ ಜನಾರ್ಧನ್ ಕಂಡ್ರೆ ಸುಂದರ ಹುಡುಗಿಯರು ಮಾರುದ್ದ ದೂರ.!
ಇನ್ನೊಂದು ವರ್ಷದಲ್ಲಿ ಜನಾರ್ಧನ್ ಮದುವೆ ಆಗಲಿಲ್ಲ ಅಂದ್ರೆ 'ಸನ್ಯಾಸಿ' ಯೋಗ ಇದೆ. ಮಗ ಸನ್ಯಾಸಿ ಆಗದೆ, ಸಂಸಾರಿ ಆಗಬೇಕು ಎಂಬುದು ತಂದೆ-ತಾಯಿಯ ಬಯಕೆ. ಹೀಗಿರುವಾಗ 'ಮೊಟ್ಟೆ' ಜನಾರ್ಧನ್ ಗೆ ಮದುವೆ ಆಗುತ್ತಾ.? 'ದೊಡ್ಡ' ಮನಸ್ಸು ಮಾಡಿ ಒಪ್ಪಿಕೊಳ್ಳುವ ಹುಡುಗಿ ಯಾರು.? ಎಂಬುದು ಉಳಿದ ಕಥೆ.