ಒನ್ ಅಂಡ್ ಹಾಫ್ ಸಿನಿಮಾವನ್ನು ಶ್ರೇಯಸ್ ಚಿಂಗಾ ನಿರ್ದೇಶಿಸಿ, ನಟಿಸಿದ್ದಾರೆ. ಮಾನ್ವಿತಾ ಕಾಮತ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಸಾಧು ಕೋಕಿಲ, ಅನಿನಾಶ್ ಯೆಳಂದೂರ್, ಸುಚೇಂದ್ರ ಪ್ರಸಾದ್, ಸ್ಪರ್ಶ ರೇಖಾ, ಅನಂತು, ಸುಂದರಶ್ರೀ, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕುಮಾರ್, ಮಹಾಂತೇಶ್ ಹಿರೇಮಠ್, ನಿಕಿತಾ ದೋರ್ತೊಡಿ, ಲಲಿತಾ ನಾಯಕ್, ರೋಹಿತ್ ಅರುಣ್, ಅಮಾನ್, ರಾಖಿ ಭೂತಪ್ಪ ತಾರಾಬಳಗದಲ್ಲಿದ್ದಾರೆ. ಸಿನಿಮಾಗೆ ದೇವೇಂದ್ರ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತವಿದೆ.
ರೋಮ್ಯಾಂಟಿಕ್ ಕಾಮಿಡಿ ಕಥಾಹಂದರದ ಹೊಂದಿರುವ ಒನ್ ಅಂಡ್ ಆಫ್ ಸಿನಿಮಾವನ್ನು ಸುಲಕ್ಷ್ಮೀ ಫಿಲಂಸ್ ನಡಿ ಚರಣ್ ಸುಬ್ಬಯ್ಯ ನಿರ್ಮಾಣ ಮಾಡುತ್ತಿದ್ದಾರೆ. ಚರಣ್ ಸುಬ್ಬಯ್ಯ ಈ ಹಿಂದೆ ರಂಗ್ಬಿರಂಗಿ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಒನ್ ಅಂಡ್ ಹಾಫ್‌ನ ಮತ್ತೊಂದು ವಿಶೇಷವೆಂದರೆ ಸಿನಿಮಾದಲ್ಲಿ ನಾಯಕನಿಗೆ 'ಕನ್ನಡ' ಎಂದು ಹೆಸರಿಡಲಾಗಿದೆ.