ವಿಜಯಪ್ರಸಾದ್ ನಿರ್ದೇಶನದಲ್ಲಿ ಮೂಡಿಬಂದಿರುವ ಪರಿಮಳ ಲಾಡ್ಜ್ ಚಿತ್ರದಲ್ಲಿ ಯೋಗೇಶ್, ಸುಮನ್ ರಂಗನಾಥನ್ ಮತ್ತು ದತ್ತಣ್ಣ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಹೇಮಾ ದತ್ತ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಟೀಸರ್ ನ್ನು 2019 ಆಗಸ್ಟ್ 28 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದರು. ಮೊದಲು ಚಿತ್ರದಲ್ಲಿ ಸತೀಶ್ ನೀನಾಸಂ ಮತ್ತು ಬುಲೆಟ್ ಪ್ರಕಾಶ್ ಕೂಡ ನಟಿಸುವುದು ನಿಗದಿಯಾಗಿತ್ತು. ನಂತರ ಬುಲೆಟ್ ಪ್ರಕಾಶ್ ನಿಧನರಾದರಿಂದ ಮತ್ತು ಸತೀಶ್ ಕೆಲ ಕಾರಣಗಳಿಂದ ಚಿತ್ರದಿಂದ ದೂರವಾದರು.
ಎಸ್. ಪ್ರಸನ್ನ ನಿರ್ಮಿಸಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.