ಪಿಂಕಿ ಎಲ್ಲಿ ಸಿನಿಮಾವನ್ನು ಪೃಥ್ವಿ ಕೋಣನೂರು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅಕ್ಷತಾ ಪಾಂಡವಪುರ, ದೀಪಕ್ ಸುಬ್ರಮಣ್ಯ, ಪೃಥ್ವಿ, ಗುಂಜಲಮ್ಮ, ಸಂಗಮ್ಮ ಮುಂತಾದವರು ನಟಿಸಿದ್ದಾರೆ. ಇದು ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಆಧರಿತ ಸಿನಿಮಾವಾಗಿದ್ದು, 2021ರಲ್ಲಿ ನ್ಯೂಯಾರ್ಕ್ ಇಂಡಿಯನ್ ಪಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡು ಅತ್ಯುತ್ತಮ ಚಿತ್ರಕಥೆ ವಿಭಾಗ ಮತ್ತು ಅತ್ಯುತ್ತಮ ನಟಿ ವಿಭಾಗದಲ್ಲಿ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಅವರಿಗೆ ಪ್ರಶಸ್ತಿ ಲಭಿಸಿತ್ತು. ಸಪ್ತಗಿರಿ ಕ್ರಿಯೇಷನ್ ಅಡಿಯಲ್ಲಿ ಈ ಸಿನಿಮಾವನ್ನು ಕೃಷ್ಣೇಗೌಡ ನಿರ್ಮಿಸಿದ್ದು, ಅರ್ಜುನ್ ರಾಜಾ ಛಾಯಾಗ್ರಹಣ ಮಾಡಿದ್ದಾರೆ.
ಕಥೆ: ಮಗವೊಂದು ಕಾಣೆಯಗಿರುತ್ತದೆ. ಆದರೆ, ಈ ಕಥೆ ಮಗುವಿನ ಸುತ್ತ ಇರುವುದಿಲ್ಲ. ಮಗುವನ್ನು ಕಳೆದುಕೊಂಡವರ ಸುತ್ತ ಈ ಕಥೆಯಿರುತ್ತದೆ. ಪುಟಾಣಿ ಮಗುವಿನಿಂದಲೇ ಜೀವನ ಸಾಗಿಸುತ್ತಿದ್ದ ತಾಯಿಗೆ, ಒಂದು ದಿನ ಅದೇ ಮಗು ಕಣ್ಮರೆಯಾದರೆ ಏನಾಗಬಹುದು? ಹಾಗೆ ಕಳೆದು ಹೋದ ಪಿಂಕಿ ಸಿಗ್ತಳಾ? ಎಂಬುದೇ ಸಿನಿಮಾ ಕಥೆ.
ಬಿಡುಗಡೆ: ಪಿಂಕಿ ಎಲ್ಲಿ ಸಿನಿಮಾ ಜೂನ್ 2ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.