ಖ್ಯಾತ ಕಿರುತೆರೆ ನಿರ್ದೇಶಕ ಎಸ್ ವೆಂಕಟೇಶ್ ಕೊಟ್ಟೂರು ನಿರ್ದೇಶನದ ರಾಗ ಭೈರವಿ ಚಿತ್ರದಲ್ಲಿ ಅಂಬರೀಶ್ ಸಾರಂಗಿ ಮತ್ತು ಮಹಾಲಕ್ಷ್ಮಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಹರೀಶ್ ಎಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಚಿತ್ರಕ್ಕೆ ಪಿ.ವಿ.ರ್ ಸ್ವಾಮಿ ಛಾಯಾಗ್ರಹಣ ಮತ್ತು ಡಾ. ಜಯದೇವ್ ಜಂಗಮಶೆಟ್ಟಿ ಸಂಗೀತವಿದೆ. 2020 ರ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಕನ್ನಡ ಚಲನಚಿತ್ರಗಳ ವಿಭಾಗದಲ್ಲಿ ಈ ಚಿತ್ರ ಪ್ರದರ್ಶನಗೊಂಡಿತು.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸಾಧಕಿ ಭೈರವಿ ಎಂಬ ಯುವತಿಯ ಕಥೆ ಚಿತ್ರದಲ್ಲಿದೆ.