ರಾಕ್ಷಸ ತಂತ್ರ ಸಿನಿಮಾವನ್ನು ಮೇಘ ಅಕ್ಷರ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ರಕ್ಷಿತಾ ಮಲ್ಲಿಕ್, ತಿಲಕ್ ಕೆ, ಸುಖೇಶ್ ಎ, ರಕ್ಷಿತಾ ಎನ್ ಮುಂತಾದವರು ನಟಿಸಿದ್ದಾರೆ. ಚಿತ್ರದಲ್ಲಿ ನಾಯಕಿ-ನಾಯಕ ಅಂತೇನಿಲ್ಲ, ಐದು ಪಾತ್ರಗಳು ಕೂಡ ಅಷ್ಟೇ ಪ್ರಾಮುಖ್ಯತೆ ಹೊಂದಿದೆ. ಚಿತ್ರಕ್ಕೆ ದಿನೇಶ್ ಬಾಬು ಛಾಯಾಗ್ರಹಣ ಹಾಗೂ ಸತೀಶ್ ಚಂದ್ರಯ್ಯ ಸಂಕಲನವಿದೆ. ಮೇಘ ಅಕ್ಷರ ಈ ಸಿನಿಮಾ ನಿರ್ದೇಶಿಸಿ, ನಟಿಸುವುದರ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ.
ಕಥೆ: ಐದು ಜನ ಸ್ನೇಹಿತರು ಕಾನ್ಫೆರನ್ಸ್ ಕಾಲ್ ಮಾಡಿಕೊಂಡಿರುವಾಗ ಒಂದು ವಿಚಿತ್ರವನ್ನು ನೋಡುತ್ತಾರೆ. ಅದರಿಂದ ಮುಂದೆ ಏನಾಗುತ್ತದೆ ಎಂಬುದೇ ಸಿನಿಮಾದ ಕಥಾಹಂದರ. ಇದೊಂದು ರೋಚಕ ಕಥೆಯನ್ನು ಹೊಂದಿರುವ ಸಿನಿಮಾ.
ಬಿಡುಗಡೆ: ರಾಕ್ಷಸ ತಂತ್ರ ಸಿನಿಮಾ 2024ರ ಮಾರ್ಚ್ 22ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.