ಒಂ ಸಾಯಿಪ್ರಕಾಶ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರವನ್ನು ಕೆ ಬಾಲುಮುತ್ತಯ್ಯ ನಿರ್ಮಾಣ ಮಾಡಿದರು. ರವಿಚಂದ್ರನ್,ಜಗ್ಗೇಶ್, ಕಾವೇರಿ ಮತ್ತು ಲೈಲಾ ಮುಖ್ಯಪಾತ್ರದಲ್ಲಿ ನಟಿಸಿದ್ದ ಈ ಚಿತ್ರ 2004 ರಲ್ಲಿ ತೆರೆಕಂಡಿತು. ಈ ಚಿತ್ರ 1985 ರಲ್ಲಿ ತೆರೆಕಂಡ ತಮಿಳಿನ `ಆನ್ ಪಾವಂ' ಎಂಬ ಚಿತ್ರದ ರಿಮೇಕ್.
ರಾಮ ಮತ್ತು ಕೃಷ್ಣ ಎಂಬ ಸಹೋದರರ ಮದುವೆಯ ವಿಚಾರವಾಗಿ ನೆಡೆಯುವ ಹಾಸ್ಯ ಸನ್ನಿವೇಶವನ್ನು ಚಿತ್ರ ಕಟ್ಟಿ ಕೊಡುತ್ತದೆ. ತಂದೆ ಪಾತ್ರದಲ್ಲಿ ದೊಡ್ಡಣ್ಣ ಮತ್ತು ಅಜ್ಜಿಯ ಪಾತ್ರದಲ್ಲಿ ಎಂ.ಎನ್.ಲಕ್ಷ್ಮಿದೇವಿ ಹಾಸ್ಯ ಬುಗ್ಗೆಯನ್ನು ಹರಿಸುತ್ತಾರೆ.