ಸುನೀಲ್ ಆಚಾರ್ಯ ನಿರ್ದೇಶನದ ರಾಂಧವ ಚಿತ್ರದಲ್ಲಿ ಭುವನ್ ಪೊನ್ನಣ್ಣ ಎರಡು ಶೇಡ್ ನಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕಿಯರಾಗಿ ಅಪೂರ್ವ ಶ್ರೀನಿವಾಸನ್, ರಾಶಿ ಬಾಲಕೃಷ್ಣ ನಟಿಸಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಮೂಡಿಬಂದ ಹಾಡುಗಳಿಗೆ ಶಶಾಂಕ್ ಶೇಷಗಿರಿ ಸಂಗೀತ ನೀಡಿದ್ದಾರೆ.
ನಾಯಕ ರಾಬರ್ಟ್ (ಭುವನ್ ಪೊನ್ನಣ್ಣ) ವಿಚಿತ್ರವಾದ ಗೂಬೆಗಳ ಮೇಲೆ ಡಾಕ್ಯೂಮೆಂಟರಿ ಮಾಡಲು ಹೊರಡುತ್ತಾನೆ. ಹೀಗೆ ಇರುವ ನಾಯಕನಿಗೆ ವಿಚಿತ್ರ ಕನಸುಗಳು ಬೀಳುತ್ತದೆ. ರಾಬರ್ಟ್ ಜೀವನಕ್ಕೂ ಆ ಕನಸಿಗೂ ಇರುವ ಸಂಬಂಧದ ಮೂಲಕ ಸಿನಿಮಾದ ನಿರೂಪಣೆ ಸಾಗುತ್ತದೆ.ವಿಚಿತ್ರ ಗೂಬೆಗೂ ನಾಯಕನಿಗೂ ಏನು ಸಂಬಂಧ, ಹಾಗಾದರೆ, ರಾಬರ್ಟ್ ಯಾರು ಎನ್ನುವುದು ಸಿನಿಮಾದ ಮುಂದಿನ ಕಥೆ.