ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿಬರಲಿರುವ ರೇಮೊ ಚಿತ್ರದಲ್ಲಿ ಇಷಾನ್ ಮತ್ತು ಆಶಿಕಾ ರಂಗನಾಥ್ ನಾಯಕ-ನಾಯಕಯಾಗಿ ನಟಿಸಲಿದ್ದಾರೆ. ಗೂಗ್ಲಿ ನಂತರ ಮತ್ತೊಂದು ಸಂಫೂರ್ಣ ಪ್ರೇಮಕಥಾ ಚಿತ್ರವನ್ನು ಪವನ್ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ದಿ ವಿಲನ್ ಖ್ಯಾತಿ ನಿರ್ಮಾಪಕ ಸಿ.ಆರ್.ಮನೋಹರ್ ಬಂಡವಾಳ ಹೂಡಲಿದ್ದಾರೆ. ಅರ್ಜುನ ಜನ್ಯ ಸಂಗೀತ ನೀಡಲಿದ್ದಾರೆ.
ಚಿತ್ರದ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಖರೀದಿಸಿದೆ.
ಚಿತ್ರದ ಕಥೆ ಬೆಂಗಳೂರು, ಹೈದರಾಬಾದ್ ಮತ್ತು ಕರ್ನಾಟಕದ ಕರಾವಳಿ ಭಾಗದಲ್ಲಿ ತೆರೆದುಕೊಳ್ಳಿಲಿದೆ. ಪವನ್ ಒಡೆಯರ್ ಚಿತ್ರದ ಹೆಚ್ಚು ಭಾಗವನ್ನು ಸಿಂಗಪೂರ್, ಇಂಗ್ಲೆಂಡ್ ಮತ್ತು ಅಜರಬೈಜಾನ್ ನಲ್ಲಿ ಚಿತ್ರೀಕರಿಸಲು ನಿರ್ಧರಿಸಿದ್ದಾರೆ. ಚಿತ್ರದ ಪೋಟೊಶೂಟ್ ಕೂಡ ಸಿಂಗಪೂರ್ ನಲ್ಲಿ ನಡೆಯಲಿದೆ. ಕೆ.ಎಂ.ಪ್ರಕಾಶ್ ಚಿತ್ರದ ಛಾಯಾಗ್ರಹಣವನ್ನು ನೋಡಿಕೊಂಡರೆ ವೈದಿ ಎಸ್ ಸಂಕಲನ ಮಾಡಲಿದ್ದಾರೆ.