ಚಿತ್ರಮಂದಿರಗಳಲ್ಲಿ ಅತಿ ಹೆಚ್ಚು ಕಾಲ ಪ್ರದರ್ಶನ ಕಂಡ ಕನ್ನಡದ ಸಾರ್ವಕಾಲಿಕ ಹಿಟ್ ಚಿತ್ರಗಳು

  1934 ರಲ್ಲಿ ತೆರಕಂಡ ಸತಿ ಸುಲೋಚನ ಚಿತ್ರದಿಂದ ಆರಂಭವಾದ ಕನ್ನಡ ಚಿತ್ರರಂಗ ಇಂದೂ ಸುಮಾರು ನಾಲ್ಕು ಸಾವಿರ ಚಿತ್ರಗಳ ಗಡಿ ದಾಟಿದೆ. ಈ ಸುದೀರ್ಘ ಸಿನಿಪಯಣದಲ್ಲಿ ಹಲವಾರು ಚಿತ್ರಗಳು ಕನ್ನಡ ಚಿತ್ರರಂಗದ ದಸೆಯನ್ನೇ ಬದಲಿಸಿವೆ. ವರ್ಷಕ್ಕೆ ಎರಡು ಮೂರು ಚಿತ್ರಗಳಿಂದ ಶುರುವಾದ ಕನ್ನಡ ಚಿತ್ರರಂಗ 2018 ರಲ್ಲಿ 243 ಚಲನಚಿತ್ರಗಳನ್ನು ನಿರ್ಮಾಣ ಮಾಡಿ ಭಾರತದಲ್ಲಿಯೇ ಅತಿ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ ಕೀರ್ತಿ ಪಡೆಯಿತು (In 2018,1st ಕನ್ನಡ- 243 ಚಿತ್ರಗಳು 2nd ಹಿಂದಿ - 238 ಚಿತ್ರಗಳು ,3rd ತೆಲಗು 237 ಚಿತ್ರಗಳು). ಕನ್ನಡದಲ್ಲಿ ಕೆಲ ಚಿತ್ರಗಳು ಚಿತ್ರಮಂದಿರಗಳಲ್ಲಿ ತುಂಬಾ ಧೀರ್ಘಾವಧಿ ಪ್ರದರ್ಶನ ಕಂಡು ಸಾರ್ವಕಾಲಿಕ ದಾಖಲೆ ಬರೆದಿವೆ. ಕನ್ನಡದಲ್ಲಿ ಅತಿ ಹೆಚ್ಚು ಕಾಲ ಪ್ರದರ್ಶನ ಕಂಡ ಚಿತ್ರಗಳನ್ನು ಈ ಕೆಳಗೆ ನೀಡಲಾಗಿದೆ. ಇಲ್ಲಿ ಶತದಿನೋತ್ಸವ ಪ್ರದರ್ಶನ ಕಂಡ ಚಿತ್ರಗಳನ್ನು ಲೆಕ್ಕಕ್ಕೆ ಹಿಡಿಯದೇ ಸುಮಾರು ಒಂದು ವರ್ಷ ಮತ್ತು ಅದಕ್ಕಿಂತ ಹೆಚ್ಚುಕಾಲ ಪ್ರದರ್ಶನ ಕಂಡ ಚಿತ್ರಗಳು ಪರಿಗಣಿಸಲಾಗಿದೆ. ಶತದಿನೋತ್ಸವ ಆಧಾರದ ಮೇಲೆ ನೋಡುವುದಾದಾರೆ ಡಾ.ರಾಜಕುಮಾರ್ ರವರ 90 % ಪ್ರತಿಶತ ಚಿತ್ರಗಳು ಶತದಿನ ಪ್ರದರ್ಶನ ಕಂಡಿವೆ. ಧೀರ್ಘಕಾಲ ಪ್ರದರ್ಶನ ಕಂಡ ಚಿತ್ರಗಳ ಜೊತೆಗೆ ಶತದಿನೋತ್ಸವದಲ್ಲಿ ವಿಶೇಷ ದಾಖಲೆ ಮಾಡಿದ ಕೆಲ ಚಿತ್ರಗಳೂ ಇಲ್ಲಿವೆ.

  1. ಕಸ್ತೂರಿ ನಿವಾಸ

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Family

  ಬಿಡುಗಡೆ ದಿನಾಂಕ

  1971

  ಪಾತ್ರವರ್ಗ

  ಡಾ.ರಾಜಕುಮಾರ್,ಆರತಿ

  ಕನ್ನಡ ಚಿತ್ರರಂಗದ ಸರ್ವಕಾಲಿಕ ಹಿಟ್ ಚಿತ್ರ ಕಸ್ತೂರಿ ನಿವಾಸ. ಆಗಿನ ಮೈಸೂರು ರಾಜ್ಯದಲ್ಲಿ ಈ ಚಿತ್ರ ಸುಮಾರು 16 ಚಿತ್ರಮಂದಿರಗಳಲ್ಲಿ 700 ಕ್ಕೂ ಹೆಚ್ಚು ದಿನಗಳ ಕಾಲ ಪ್ರದರ್ಶನ ಕಂಡು ರಾಷ್ಟ ಪ್ರಶಸ್ತಿ ಪಡೆಯಿತು.

  2. ಬಂಗಾರದ ಮನುಷ್ಯ

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Drama

  ಬಿಡುಗಡೆ ದಿನಾಂಕ

  1972

  ಈ ಚಿತ್ರದಲ್ಲಿ ಪಟ್ಟಣದಿಂದ ಹಳ್ಳಿಗೆ ಬಂದು ಬೇಸಾಯ ಮಾಡಿ ಬದುಕು ಕಟ್ಟಿಕೊಳ್ಳುವ ಒಬ್ಬ ಯುವ ರೈತನ ಪಾತ್ರದಲ್ಲಿ ಡಾ.ರಾಜ್ ಮಿಂಚಿದ್ದರು. ಈ ಚಿತ್ರ ಪರದೆಯಾಚೆಗೂ ಪರಿಣಾಮ ಬೀರಿ ಹಲವಾರು ಯುವಕರು ಕೃಷಿಗೆ ಮರಳುವಂತೆ ಮಾಡಿತು. ಸುಮಾರು ಎರಡು ವರ್ಷಕಾಲ ಪ್ರದರ್ಶನ ಕಂಡ ಈ ಚಿತ್ರ ಫೊರ್ಬ್ಸ (Forbes) ಮ್ಯಾಗಜೀನ್ ನ 25 ಅತ್ತ್ಯುತ್ತಮ ಭಾರತ ಚಿತ್ರಗಳ ಪಟ್ಟಿಯಲ್ಲಿದೆ.

  3. ನಾಗರಹಾವು

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Action

  ಬಿಡುಗಡೆ ದಿನಾಂಕ

  1972

  ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿಬಂದ ತರಾಸು ಕಾದಂಬರಿ ಆಧಾರಿತ ನಾಗರಹಾವು ಚಿತ್ರದಿಂದ ಕನ್ನಡಕ್ಕೆ ಆ್ಯಂಗ್ರಿ ಯಂಗ್ ಮ್ಯಾನ್ ವಿಷ್ಣುವರ್ಧನ್ ಪಾದಾರ್ಪಣೆ ಮಾಡಿದರು.  ಪ್ರಪ್ರಥಮ ಬಾರಿಗೆ ಮೂರು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಕಂಡ ಚಿತ್ರ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X