ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ 123 ನೇ ಚಿತ್ರವಾದ ಆರ್ ಡಿ ಎಕ್ಸ್ ನ್ನು ತಮಿಳಿನ ಖ್ಯಾತ ನಿರ್ದೇಶಕ ರವಿ ಅರಸು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ತಮಿಳಿನ ಪ್ರಸಿದ್ಢ ಪ್ರೊಡಕ್ಷನ್ಸ್ ಕಂಪನಿ ಸತ್ಯಜ್ಯೋತಿ ಫಿಲಂಸ್ ರವರು ಬಂಡವಾಳ ಹೂಡುತ್ತಿದ್ದಾರೆ. ಚಿತ್ರದ ಮುಹೂರ್ತ 2020 ಫೆಬ್ರವರಿ 19 ರಂದು ಕಂಠೀರವ ಸ್ಟುಡಿಯೊದಲ್ಲಿ ನೇರವೇರಿತು. ಬೆಂಗಳೂರು ಪೋಲಿಸ್ ಕಮಿಷನರ್ ಭಾಸ್ಕರ ರಾವ್ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು.
ಪುನೀತ್ ರಾಜಕುಮಾರ್, ಗೀತಾ ಶಿವರಾಜಕುಮಾರ್, ಸಂಗೀತ ನಿರ್ದೇಶಕ ಚರಣ್ ರಾಜ್ ಮುಂತಾದವರು ಹಾಜರಿದ್ದರು. ತಮಿಳಿನಲ್ಲಿ ವಿಶ್ವಾಸಂ, ವಿವೇಗಂ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದ ಸತ್ಯಜ್ಯೋತಿ ಫಿಲಂಸ್ ಈ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಡುತ್ತಿದ್ದಾರೆ.