twitter

    ರಾಬರ್ಟ್ ಕಥೆ

    ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 53 ನೇ ಚಿತ್ರವಾಗಿದ್ದು ಚೌಕ ಖ್ಯಾತಿಯ ನಿರ್ದೇಶಕ ತರುಣ ಸುಧೀರ್ ನಿರ್ದೇಶಿಸಿದ್ದಾರೆ. ಹೆಬ್ಬುಲಿ ಉಮಾಪತಿ ಶ್ರೀನಿವಾಸ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಚಿತ್ರದ ಡೈಲಾಗ್ ಗಳಿಗೆ ವಿಶೇಷ ಒತ್ತುಕೊಟ್ಟಿರುವ ತರುಣ್, ಕೆಜಿಎಫ್ ಖ್ಯಾತಿ ಚಂದ್ರಮೌಳಿ ಮತ್ತು ಅಮ್ಮಾ ಐ ಲವ್ ಯು ಖ್ಯಾತಿ ರಾಜಶೇಖರ್ ಕೆ.ಎಲ್ ರಿಂದ ಡೈಲಾಗ್ ಬರೆಸಿದ್ದಾರೆ. ಅರ್ಜುನ ಜನ್ಯ ಚಿತ್ರಕ್ಕೆ ಸಂಗೀತ ನೀಡಿದ್ದು , ಚಕ್ರವರ್ತಿ ಮತ್ತು ತಾರಕ್ ಚಿತ್ರದ ನಂತರ ಮೂರನೇ ಬಾರಿಗೆ ದರ್ಶನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಮಾಡೆಲ್ ಕಮ್ ನಟಿ ಆಶಾ ಭಟ್ ನಟಿಸಿದ್ದಾರೆ.

    ರಾಘವ್ (ದರ್ಶನ್) ಉತ್ತರ ಪ್ರದೇಶದ ಲಕ್ನೋದಲ್ಲಿ ಅಡುಗೆ ಭಟ್ಟನಾಗಿ ವಾಸಿಸುತ್ತಿರುತ್ತಾನೆ.ಯಾರ ತಂಟೆಗೂ ಹೋಗದ, ಸಿಟ್ಟು ಮಾಡಿಕೊಳ್ಳದ. ಮುದ್ದಾದ ಮಗನಿಗೂ ಅಹಿಂಸೆ ಹೇಳಿಕೊಟ್ಟು ಸಾತ್ವಿಕವಾಗಿ ಬದುಕುವ ಪ್ರಯತ್ನದಲ್ಲಿರುವ ಸಾಮಾನ್ಯ ಪ್ರಜೆ.

    ಆದರೆ ಆತನಿಗೊಂದು ಕರಾಳ ಹಿನ್ನೆಲೆ ಇದೆ. ಆತ ಈಗ ಸಾತ್ವಿಕನಾಗಿ ಬದುಕುತ್ತಿರುವುದಕ್ಕೆ ಘನ ಕಾರಣವೊಂದು ಇದೆ. ಆ ಕಾರಣವೇನು. ಆತನಿಗಿರುವ ಕರಾಳ ಹಿನ್ನೆಲೆ ಏನು? ಎಂಬುದು ಚಿತ್ರದ ಕಥೆ.

    ಬೆಳವಣಿಗೆ: ಚಿತ್ರದ ಸ್ಯಾಟಲೈಟ್ ಹಕ್ಕು ಉದಯ ಟಿವಿ (ಸನ್ ನೆಟವರ್ಕ್) ಗೆ 8.2 ಕೋಟಿಗೆ ಮಾರಾಟವಾದರೆ, ಡಿಜಿಟಲ್ ಹಕ್ಕು ಅಮೇಜಾನ್ ಪ್ರೈಮ್ ಗೆ 6.1 ಕೋಟಿಗೆ ಮಾರಾಟವಾಗಿದೆ. 2020 ಜನೇವರಿ 21 ರಂದು ಚಿತ್ರದ ಶೂಟಿಂಗ್ ಮುಕ್ತಾಯವಾಯಿತು. ಸುಮಾರು 180 ಜನಗಳಿದ್ದ ಚಿತ್ರತಂಡದ ಜೊತೆ ಬೆಂಗಳೂರು,ಮೈಸೂರು, ಹೈದರಾಬಾದ್, ಚೆನ್ನೈ ಮತ್ತು ವಾರಣಾಸಿಯಲ್ಲಿ 108 ದಿನಗಳ ಕಾಲ ಚಿತ್ರೀಕರಣ ಮಾಡಲಾಯಿತು. ರಾಬರ್ಟ್ ಚಿತ್ರದ ಮೊದಲ ಮೋಷನ್ ಪೋಸ್ಟರ್ ಕ್ರಿಸಮಸ್ ಪ್ರಯುಕ್ತ ಡಿಸೆಂಬರ್ 24, 2019 ರಂದು ಬಿಡುಗಡೆಯಾದರೆ, ಎರಡನೇ ಮೋಷನ್ ಪೋಸ್ಟರ್ ಸಂಕ್ರಾತಿ ಪ್ರಯುಕ್ತ ಜನೇವರಿ 15 2020 ರಂದು ಬಿಡುಗಡೆಯಾಯಿತು.

    ಈ ಚಿತ್ರದ ಥೀಮ್ ಪೋಸ್ಟರ್ ನ್ನು ದರ್ಶನ್ ರವರು ನವೆಂಬರ್ 6 ದೀಪಾವಳಿ ಹಬ್ಬದ ಸಾಯಂಕಾಲ 6 ಗಂಟೆಗೆ ಟ್ವಿಟ್ಟರ್ ಮತ್ತು ಫೇಸ್‌ಬುಕ್‌ನಲ್ಲಿ ಬಿಡುಗಡೆ ಮಾಡಿದರು. ಈ ಪೋಸ್ಟರ್ ಟ್ವಿಟ್ಟರ್‌ನಲ್ಲಿ ಆ ದಿನ ಟ್ರೆಂಡಿಂಗ್ ಆಗಿತ್ತು.ಮೇ 06, 2019 ರಂದು ಚಿತ್ರದ ಮುಹೂರ್ತ ನೇರವೇರಿತು. ಚಿತ್ರದ ಥೀಮ್ ಫೊಸ್ಟರ್ ನ್ಲಲಿ ``ಈ ಕೈಗೆ ಶಬರಿಮುಂದೆ ಸೊಲೊದು ಗೊತ್ತು..ರಾವಣನ ಮುಂದೆ ಗೆಲ್ಲೊದು'' ಎಂಬ ಅಡಿಬರಹವಿದ್ದಿದ್ದು ವಿಶೇಷ.ಚಿತ್ರದ ಎರಡನೇ ಥೀಮ್ ಪೋಸ್ಟರ್ ಜೂನ್ 5,2019 ಈದ್ ನಿಮಿತ್ಯ ಬಿಡುಗಡೆಯಾಯಿತು.

    ಬೇಸಿಗೆಯಲ್ಲಿ ಚಿತ್ರ ಬಿಡುಗಡೆ ಮಾಡಬೇಕೆಂದುಕೊಂಡಿದ್ದ ನಿರ್ಮಾಪಕರು ಎಪ್ರಿಲ್ 9, 2020 ರಂದು ಗುಡ್ ಫ್ರೈಡೇ ಪ್ರಯುಕ್ತ ಬಿಡುಗಡೆಮಾಡುವ ಸನ್ನಾಹದಲ್ಲಿದ್ದಾರೆ. ಚಿತ್ರದ ಮೊದಲ ಟೀಸರ್ ಫೆಬ್ರವರಿ 16 ಮಧ್ಯರಾತ್ರಿ ದರ್ಶನ್ ಜನ್ಮದಿನ ಪ್ರಯುಕ್ತ ಬಿಡುಗರೆಯಾಯಿತು. ಚಿತ್ರದಲ್ಲಿ ದರ್ಶನ್ ಒಂದಕ್ಕಿಂತ ಹೆಚ್ಚು ಪಾತ್ರಗಳನ್ನು ಮಾಡಿರುವ ಸುಳಿವನ್ನು ಟ್ರೇಲರ್ ನೀಡಿದೆ.

    ರಾಬರ್ಟ್ ಚಿತ್ರದ ಮೊದಲ ಗೀತೆ ಬಾ ಬಾ ನಾ ರೆಡಿ 2020 ಮಾರ್ಚ್ 3 ರಂದು ಬಿಡುಗಡೆಯಾಯಿತು. ನಲ್ಲ ನಾಗೇಂದ್ರ ಸಾಹಿತ್ಯದಲ್ಲಿ ಮೂಡಿಬಂದ ಈ ಗೀತೆಗೆ ವ್ಯಾಸರಾಜ್ ಸೋಸಳೆ ಧ್ವನಿಯಾಗಿದ್ದರು.ಎರಡನೇ ಲಿರಿಕಲ್ ಗೀತೆ `ಜೈ ಶ್ರೀರಾಮ್ 2020 ಮಾರ್ಚ್ 9 ರಂದು ಬಿಡುಗಡೆಯಾಯಿತು. ನಲ್ಲ ನಾಗೇಂದ್ರ ಸಾಹಿತ್ಯದಲ್ಲಿ ಮೂಡಿಬಂದ ಈ ಗೀತೆಯನ್ನು ದಿವ್ಯ ಕುಮಾರ್ ಹಾಡಿದ್ದರು.

    ಚಿತ್ರದ ಫ್ರೀ ರೀಲೀಸ್ ಇವೆಂಟ್ ಹುಬ್ಬಳ್ಳಿಯಲ್ಲಿ ನಡೆಯಿತು.

     

    **Note:Hey! Would you like to share the story of the movie ರಾಬರ್ಟ್ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X