X
ರಾಬರ್ಟ್

ರಾಬರ್ಟ್

Action | 11 Mar 2021 | U/A | 166 Mins
Kannada

2.5 /5 Users

3.5 /5 Filmibeat

ರಾಬರ್ಟ್ ಕಥೆ

ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 53 ನೇ ಚಿತ್ರವಾಗಿದ್ದು ಚೌಕ ಖ್ಯಾತಿಯ ನಿರ್ದೇಶಕ ತರುಣ ಸುಧೀರ್ ನಿರ್ದೇಶಿಸಿದ್ದಾರೆ. ಹೆಬ್ಬುಲಿ ಉಮಾಪತಿ ಶ್ರೀನಿವಾಸ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಚಿತ್ರದ ಡೈಲಾಗ್ ಗಳಿಗೆ ವಿಶೇಷ ಒತ್ತುಕೊಟ್ಟಿರುವ ತರುಣ್, ಕೆಜಿಎಫ್ ಖ್ಯಾತಿ ಚಂದ್ರಮೌಳಿ ಮತ್ತು ಅಮ್ಮಾ ಐ ಲವ್ ಯು ಖ್ಯಾತಿ ರಾಜಶೇಖರ್ ಕೆ.ಎಲ್ ರಿಂದ ಡೈಲಾಗ್ ಬರೆಸಿದ್ದಾರೆ. ಅರ್ಜುನ ಜನ್ಯ ಚಿತ್ರಕ್ಕೆ ಸಂಗೀತ ನೀಡಿದ್ದು , ಚಕ್ರವರ್ತಿ ಮತ್ತು ತಾರಕ್ ಚಿತ್ರದ ನಂತರ ಮೂರನೇ ಬಾರಿಗೆ ದರ್ಶನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಮಾಡೆಲ್ ಕಮ್ ನಟಿ ಆಶಾ ಭಟ್ ನಟಿಸಿದ್ದಾರೆ. ರಾಘವ್ (ದರ್ಶನ್) ಉತ್ತರ ಪ್ರದೇಶದ ಲಕ್ನೋದಲ್ಲಿ ಅಡುಗೆ ಭಟ್ಟನಾಗಿ ವಾಸಿಸುತ್ತಿರುತ್ತಾನೆ.ಯಾರ ತಂಟೆಗೂ ಹೋಗದ, ಸಿಟ್ಟು ಮಾಡಿಕೊಳ್ಳದ. ಮುದ್ದಾದ ಮಗನಿಗೂ ಅಹಿಂಸೆ ಹೇಳಿಕೊಟ್ಟು ಸಾತ್ವಿಕವಾಗಿ ಬದುಕುವ ಪ್ರಯತ್ನದಲ್ಲಿರುವ ಸಾಮಾನ್ಯ ಪ್ರಜೆ. ಆದರೆ ಆತನಿಗೊಂದು ಕರಾಳ ಹಿನ್ನೆಲೆ ಇದೆ. ಆತ ಈಗ ಸಾತ್ವಿಕನಾಗಿ ಬದುಕುತ್ತಿರುವುದಕ್ಕೆ ಘನ ಕಾರಣವೊಂದು ಇದೆ. ಆ ಕಾರಣವೇನು. ಆತನಿಗಿರುವ ಕರಾಳ ಹಿನ್ನೆಲೆ ಏನು? ಎಂಬುದು ಚಿತ್ರದ ಕಥೆ. ಬೆಳವಣಿಗೆ : ಚಿತ್ರದ ಸ್ಯಾಟಲೈಟ್ ಹಕ್ಕು ಉದಯ ಟಿವಿ (ಸನ್ ನೆಟವರ್ಕ್) ಗೆ 8.2 ಕೋಟಿಗೆ ಮಾರಾಟವಾದರೆ, ಡಿಜಿಟಲ್ ಹಕ್ಕು ಅಮೇಜಾನ್ ಪ್ರೈಮ್ ಗೆ 6.1 ಕೋಟಿಗೆ ಮಾರಾಟವಾಗಿದೆ. 2020 ಜನೇವರಿ 21 ರಂದು ಚಿತ್ರದ ಶೂಟಿಂಗ್ ಮುಕ್ತಾಯವಾಯಿತು. ಸುಮಾರು 180 ಜನಗಳಿದ್ದ ಚಿತ್ರತಂಡದ ಜೊತೆ ಬೆಂಗಳೂರು,ಮೈಸೂರು, ಹೈದರಾಬಾದ್, ಚೆನ್ನೈ ಮತ್ತು ವಾರಣಾಸಿಯಲ್ಲಿ 108 ದಿನಗಳ ಕಾಲ ಚಿತ್ರೀಕರಣ ಮಾಡಲಾಯಿತು. ರಾಬರ್ಟ್ ಚಿತ್ರದ ಮೊದಲ ಮೋಷನ್ ಪೋಸ್ಟರ್ ಕ್ರಿಸಮಸ್ ಪ್ರಯುಕ್ತ ಡಿಸೆಂಬರ್ 24, 2019 ರಂದು ಬಿಡುಗಡೆಯಾದರೆ, ಎರಡನೇ ಮೋಷನ್ ಪೋಸ್ಟರ್ ಸಂಕ್ರಾತಿ ಪ್ರಯುಕ್ತ ಜನೇವರಿ 15 2020 ರಂದು ಬಿಡುಗಡೆಯಾಯಿತು. ಈ ಚಿತ್ರದ ಥೀಮ್ ಪೋಸ್ಟರ್ ನ್ನು ದರ್ಶನ್ ರವರು ನವೆಂಬರ್ 6 ದೀಪಾವಳಿ ಹಬ್ಬದ ಸಾಯಂಕಾಲ 6 ಗಂಟೆಗೆ ಟ್ವಿಟ್ಟರ್ ಮತ್ತು ಫೇಸ್‌ಬುಕ್‌ನಲ್ಲಿ ಬಿಡುಗಡೆ ಮಾಡಿದರು. ಈ ಪೋಸ್ಟರ್ ಟ್ವಿಟ್ಟರ್‌ನಲ್ಲಿ ಆ ದಿನ ಟ್ರೆಂಡಿಂಗ್ ಆಗಿತ್ತು.ಮೇ 06, 2019 ರಂದು ಚಿತ್ರದ ಮುಹೂರ್ತ ನೇರವೇರಿತು. ಚಿತ್ರದ ಥೀಮ್ ಫೊಸ್ಟರ್ ನ್ಲಲಿ ``ಈ ಕೈಗೆ ಶಬರಿಮುಂದೆ ಸೊಲೊದು ಗೊತ್ತು..ರಾವಣನ ಮುಂದೆ ಗೆಲ್ಲೊದು'' ಎಂಬ ಅಡಿಬರಹವಿದ್ದಿದ್ದು ವಿಶೇಷ.ಚಿತ್ರದ ಎರಡನೇ ಥೀಮ್ ಪೋಸ್ಟರ್ ಜೂನ್ 5,2019 ಈದ್ ನಿಮಿತ್ಯ ಬಿಡುಗಡೆಯಾಯಿತು. ಬೇಸಿಗೆಯಲ್ಲಿ ಚಿತ್ರ ಬಿಡುಗಡೆ ಮಾಡಬೇಕೆಂದುಕೊಂಡಿದ್ದ ನಿರ್ಮಾಪಕರು ಎಪ್ರಿಲ್ 9, 2020 ರಂದು ಗುಡ್ ಫ್ರೈಡೇ ಪ್ರಯುಕ್ತ ಬಿಡುಗಡೆಮಾಡುವ ಸನ್ನಾಹದಲ್ಲಿದ್ದಾರೆ. ಚಿತ್ರದ ಮೊದಲ ಟೀಸರ್ ಫೆಬ್ರವರಿ 16 ಮಧ್ಯರಾತ್ರಿ ದರ್ಶನ್ ಜನ್ಮದಿನ ಪ್ರಯುಕ್ತ ಬಿಡುಗರೆಯಾಯಿತು. ಚಿತ್ರದಲ್ಲಿ ದರ್ಶನ್ ಒಂದಕ್ಕಿಂತ ಹೆಚ್ಚು ಪಾತ್ರಗಳನ್ನು ಮಾಡಿರುವ ಸುಳಿವನ್ನು ಟ್ರೇಲರ್ ನೀಡಿದೆ. ರಾಬರ್ಟ್ ಚಿತ್ರದ ಮೊದಲ ಗೀತೆ ಬಾ ಬಾ ನಾ ರೆಡಿ 2020 ಮಾರ್ಚ್ 3 ರಂದು ಬಿಡುಗಡೆಯಾಯಿತು. ನಲ್ಲ ನಾಗೇಂದ್ರ ಸಾಹಿತ್ಯದಲ್ಲಿ ಮೂಡಿಬಂದ ಈ ಗೀತೆಗೆ ವ್ಯಾಸರಾಜ್ ಸೋಸಳೆ ಧ್ವನಿಯಾಗಿದ್ದರು. ಎರಡನೇ ಲಿರಿಕಲ್ ಗೀತೆ `ಜೈ ಶ್ರೀರಾಮ್ 2020 ಮಾರ್ಚ್ 9 ರಂದು ಬಿಡುಗಡೆಯಾಯಿತು. ನಲ್ಲ ನಾಗೇಂದ್ರ ಸಾಹಿತ್ಯದಲ್ಲಿ ಮೂಡಿಬಂದ ಈ ಗೀತೆಯನ್ನು ದಿವ್ಯ ಕುಮಾರ್ ಹಾಡಿದ್ದರು. ಚಿತ್ರದ ಫ್ರೀ ರೀಲೀಸ್ ಇವೆಂಟ್ ಹುಬ್ಬಳ್ಳಿಯಲ್ಲಿ ನಡೆಯಿತು.  
Read More

ರಾಬರ್ಟ್ ಕಲಾವಿದರು ಮತ್ತು ಸಿಬ್ಬಂದಿ

ರಾಬರ್ಟ್ ಕ್ರೂ ಮಾಹಿತಿ

ನಿರ್ದೇಶಕ ತರುಣ್ ಸುಧೀರ್
ಕಥೆ ತರುಣ್ ಸುಧೀರ್
ಸಿನಿಮಾಟೋಗ್ರಫಿ ಸುಧಾಕರ್ ಎಸ್ ರಾಜ್
ಸಂಪಾದಕ ಕೆ.ಎಂ.ಪ್ರಕಾಶ್
ಸಂಗೀತ ಅರ್ಜುನ್ ಜನ್ಯ
ನಿರ್ಮಾಪಕ ಉಮಾಪತಿ ಶ್ರೀನಿವಾಸ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ರಾಬರ್ಟ್ ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮಿಬೀಟ್
ದರ್ಶನ್ ಸಿನಿಮಾ ಮಾಡುವುದು ನಿರ್ದೇಶಕನಿಗೆ ಹಗ್ಗದ ಮೇಲಿನ ನಡಿಗೆ. ಇದನ್ನು 'ರಾಬರ್ಟ್' ಸಿನಿಮಾದಲ್ಲಿ ಚೆನ್ನಾಗಿಯೇ ನಿಭಾಯಿಸಿದ್ದಾರೆ ನಿರ್ದೇಶಕ ತರುಣ್ ಸುಧೀರ್. ಸಿನಿಮಾ ನೋಡುವಾಗ 'ಭಾಷಾ', 'ಇಂದ್ರ', 'ಸಿಂಹಾದ್ರಿ' ಇದೇ ಕೆಲವು 'ಫ್ಲಾಷ್‌ಬ್ಯಾಕ್' ಮಾದರಿ ತಂತ್ರ ಅನುಸರಿಸಿ ಗೆದ್ದಿರುವ ಸಿನಿಮಾಗಳು ನೆನಪಾಗಬಹುದು. ಈಗಾಗಲೇ ಹಲವು ಸಿನಿಮಾಗಳಲ್ಲಿ ಬಳಕೆ ಆಗಿರುವ 'ಜನಪ್ರಿಯ ಮಾದರಿ' ಕತೆಯನ್ನು ಪ್ರೇಕ್ಷಕರಿಗೆ ಬೋರಾಗದಂತೆ ಹೇಳುವುದು ಸುಲಭದ ಕಾರ್ಯವೇನಲ್ಲ. ತರುಣ್ ಸುಧೀರ್ ಅದನ್ನು ಚೆನ್ನಾಗಿಯೇ ನಿಭಾಯಿಸಿದ್ದಾರೆ. 'ರಾಬರ್ಟ್' ಸಿನಿಮಾ ಎಲ್ಲೂ ಬೋರ್ ಎನಿಸುವುದಿಲ್ಲ.

ರಾಬರ್ಟ್ ಟ್ರೇಲರ್

Video Thumbnail

ರಾಬರ್ಟ್ ಪಾಟ್ಲುಗಳು

ರಾಬರ್ಟ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ರಾಬರ್ಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+