ರೂಪಾಂತರ ಸಿನಿಮಾವನ್ನು ಮಿಥಿಲೇಶ್ ಎಡವಲತ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಉಳಿದಂತೆ ಅಂಜನ್ ಭಾರದ್ವಾಜ್, ಲೇಖಾ ನಾಯ್ಡು, ಸೋಮಶೇಖರ್ ಬೋಲೆಂಗಾವ್, ಹನುಮಕ್ಕ, ಭರತ್ ಜಿ.ಬಿ ತಾರಾಗಣದಲ್ಲಿದ್ದಾರೆ. ಮಿಥುನ್ ಮುಕುಂದನ್ ಸಂಗೀತ, ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ, ಭುವನೇಶ್ ಮಣಿವಣ್ಣನ್ ಸಂಕಲನ ಸಿನಿಮಾಗಿದೆ. ಸುಹಾನ್ ಪ್ರಸಾದ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಐದು ಪಾತ್ರಗಳ ಸುತ್ತುತ್ತದೆ.
ಬಿಡುಗಡೆ: ರೂಪಾಂತರ ಸಿನಿಮಾ 2024ರ ಜುಲೈ 26ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.