ಒಬ್ಬ ಮಧ್ಯ ವಯಸ್ಸಿನ ಮಾನಸಿಕ ವೈದ್ಯ ದಾರಿಯಲ್ಲಿನ ಒಬ್ಬ ಹುಚ್ಚು ಯುವತಿಯನ್ನು ಕರೆತಂದು ಅವಳಿಗೆ ಆರೈಕೆ ನೀಡಿ ಕೊನೆಗೆ ಅವಳ ಪ್ರೇಮದಲ್ಲಿ ಬೀಳುತ್ತಾನೆ. ಆದರೆ ಅವಳು ಅವನ ಅಳಿಯನ ಪ್ರೀತಿಯಲ್ಲಿ ಬಿದ್ದಾಗ ಮಾನಸಿಕವಾಗಿ ಜರ್ಜರಿತವಾದ ವೈದ್ಯ ಕೊನೆಗೆ ಹುಚ್ಚನಾಗುತ್ತಾನೆ.2018 ರಲ್ಲಿ ಉದಯ ಟಿವಿಯಲ್ಲಿ ಈ ಚಿತ್ರದ ಮುಂದುವರೆದ ಭಾಗವಾಗಿ `ಮಾನಸ ಸರೋವರ' ಧಾರಾವಾಹಿ ಮೂಡಿಬಂದಿದೆ.