ರಾಯಲ್ ಮೆಕ್ ಕನ್ನಡ ಸಿನಿಮಾವನ್ನು ನಾಗಭೂಷಣ್ ಜಂತಗಲ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಭದ್ರಾವತಿ ಮೂಲದ ಯುವನಟ ಧನುಷ್ ಮಾಧವನ್ ನಾಯಕನಾಗಿ ಹಾಗೂ ಶ್ರಾವ್ಯ ರಾವ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ರಾಘವೇಂದ್ರ ರಾಜ್‌ಕುಮಾರ್, ಕುರಿ ಪ್ರತಾಪ್, ವಿನಯ ಪ್ರಸಾದ್, ರಮೇಶ್ ಭಟ್, ರೇಖಾ ದಾಸ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪವನ್ ಮತ್ತು ಗೌತಮಿ ಜಯರಾಂ ಸೇರಿಸಂತೆ ಹಲವರು ತಾರಾಗಣದಲ್ಲಿದ್ದಾರೆ. ಶಬರಿ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಚಂದ್ರಮೋಹನ್ ಛಾಯಾಗ್ರಹಣ ಹಾಗೂ ರಿಜ್ವಾನ್ ಅಹ್ಮದ್ ಸಂಗೀತ ಚಿತ್ರಕ್ಕಿದೆ. ಈ ಸಿನಿಮಾ ಇಂಜಿನಿಯರ್ ಒಬ್ಬನ ಕಥೆಯನ್ನು ಒಳಗೊಂಡಿದೆ.