ಸಂತೋಷ ಸಂಗೀತ ಸಿನಿಮಾ ಸಿದ್ದು ಎಸ್ ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಅರ್ನವ್ ವಿನ್ಯಾಸ್ ನಾಯಕನಾಗಿ ಹಾಗೂ ರಾಣಿ ವರದ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಅವಿನಾಶ್, ದೊಡ್ಡಣ್ಣ, ಲಯ ಕೋಕಿಲ, ಮಡೆನೂರು ಮನು, ಮಿಮಿಕ್ರಿ ಗೋಪಿ, ವಾಣಿ, ಸೂರ್ಯ ಕಿರಣ್ ಮುಂತಾದವರು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಪ್ರಮೋದ್ ಭಾರತೀಯ ಛಾಯಾಗ್ರಹಣವಿದೆ.