ಶಬ್ದವೇಧಿ ಚಿತ್ರದಲ್ಲಿ ವರನಟ ರಾಜ್ ಕುಮಾರ್ ನಾಯಕನಾಗಿ ಮತ್ತು ಜಯಪ್ರದ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಶ್ರೀನಗರ್ ನಾಗರಾಜ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.ಎಸ್ ನಾರಾಯಣ್ ಅವರ ನಿರ್ದೇಶನ ಮತ್ತು ಹಂಸಲೇಖ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಒಡಹುಟ್ಟಿದವರು ಚಿತ್ರದ ನಂತರ ಸುಮಾರು ಆರು ವರ್ಷಗಳ ತರುವಾಯ ಡಾ. ರಾಜಕುಮಾರ್ ರವರು ನಟಿಸಿದ ಚಿತ್ರ. ತಮ್ಮ ಕೊನೆಯ ಚಿತ್ರವಾದ ಶಬ್ಧವೇಧಿಯಲ್ಲಿ ಮಾದಕ ವಸ್ತುಗಳ ಜಾಲವನ್ನು ಭೇಧಿಸುವ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದರು.